ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾಗವಾಡದ ಶಿರಗುಪ್ಪಿ ಶುಗರ್ ವಕ್ರ್ಸ್ ಸಕ್ಕರೆ ಕಾರ್ಖಾನೆಯ 98 ದಿನಗಳಲ್ಲಿ 5.20 ಲಕ್ಷ ಟನ್ ಕಬ್ಬು ನುರಿಸಿ 6 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಈ ಸಕ್ಕರೆ ಚೀಲ್‍ಗಳ ಪೂಜೆ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗ್ಗೆಣ್ಣವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ ದೊಡ್ಡನ್ನವರ ಪೂಜೆ ಸಲ್ಲಿಸಿದರು.

ರವಿವಾರ ರಂದು ಶಿರಗುಪ್ಪಿ ಶುಗರ್ ವಕ್ರ್ಸ್ ಸಕ್ಕರೆ ಕಾರ್ಖಾನೆಯಲ್ಲಿ 6 ಲಕ್ಷ ಕ್ವಿಂಟಲ್ ಸಕ್ಕರೆ ಚೀಲ್‍ಗಳಿಗೆ ಪೂಜೆ ನೆರವೇರಿಸುವ ಕಾರ್ಯಕ್ರಮ ನೆರವೇರಿತು.
ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗ್ಗೆಣ್ಣವರ ಮಾತನಾಡುವಾಗ, ಪ್ರಸಕ್ತ ಕಬ್ಬು ನುರಿಸುವ 10ನೇ ವರ್ಷದ ಹಂಗಾಮಿನಲ್ಲಿ 98 ದಿನಗಳಲ್ಲಿ 5.20 ಲಕ್ಷ ಟನ್ ಕಬ್ಬು ನುರಿಸಿ 6 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದ್ದು, ಇದೊಂದು ದಾಖಲೆ ನಿರ್ಮಿಸಿದೆ. ಇದರ ಶ್ರೇಯಸ್ಸ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಎಲ್ಲ ಕಾರ್ಮಿಕರಿಗೆ ಮತ್ತು ಸಂಚಾಲಕ ಮಂಡಳಿಗೆ ಸಲ್ಲುತ್ತದೆ. ಈ ವರ್ಷ ಸುಮಾರು 8 ಲಕ್ಷ ಚೀಲ್ ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದ್ದೇವೆಯೆಂದು ಹೇಳಿ ಹರ್ಷ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆ ಎಂ.ಡಿ ಮತ್ತು ಬೆಳಗಾವಿಯ ಖ್ಯಾತ ಹೃದಯರೋಗ ತಜ್ಞರಾದ ಡಾ. ರಮೇಶ ದೊಡ್ಡನ್ನವರ ಮಾತನಾಡುವಾಗ, ಕಾರ್ಖಾನೆ ಪ್ರಾರಂಭಿಸಿ 10 ವರ್ಷ ಗತಿಸಿದೆ. ಪ್ರಾರಂಭದಲ್ಲಿ ಅನೇಕ ಅಡೆತಡೆಗಳು ಬಂದವು. ಆದರೂ, ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣ ಮಗ್ಗೆಣ್ಣವರ ಮತ್ತು ಎಲ್ಲ ಸಂಚಾಲಕರು ಗಟ್ಟಿಯಾಗಿ ಉಳಿದಿದ್ದರಿಂದ ಕಾರ್ಖಾನೆಗೆ ಒಂದು ಹೊಸ ಬೆಳಕು ಬಂದಂತಾಗಿದೆ. ಜನರಲ್ ಮ್ಯಾನೇಜರ್ ಅರುಣ ಫರಾಂಡೆ ಇವರ ಆಡಳಿತದಲ್ಲಿ ಗುಣಮಟ್ಟದ ಸಕ್ಕರೆ ಉತ್ಪಾದಿಸುವದೊಂದಿಗೆ ಎಲ್ಲರನ್ನು ಒಂದುಗೂಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆಯೆಂದರು.
ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಪ್ರತಿಮೆ ಪೂಜನೆ ನೆರವೇರಿತು. ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಪ್ರಾರಂಭಿಸುವ ಸಹಕಾರಿ ಕ್ರೇಡಿಟ್ ಸಂಘದ ಸದಸ್ಯ ನೊಂದಣಿಗೆ ಚಾಲನೆ ನೀಡಿದರು. ಕೊರೊನಾ ವಾರಿಯರ್ಸ್‍ರಾಗಿ ಸೇವೆ ಸಲ್ಲಿಸುತ್ತಿರುವ ಕಾಗವಾಡ ತಾಲ್ಲೂಕಿನ ಪತ್ರಕರ್ತರಿಗೆ, ನ್ಯಾಯವಾದಿ ಎಸ್.ಟಿ.ಮುನ್ನೋಳಿ, ಅರುಣ ಫರಾಂಡೆ, ಡಾ. ಸಾವೀತ್ರಿ ರಮೇಶ ದೊಡ್ಡನ್ನವರ ಇವರಿಗೆ ಸನ್ಮಾನಿಸಲಾಯಿತು.
ಸಕ್ಕರೆ ಕಾರ್ಖಾನೆ ಸಂಚಾಲಕರಾದ ರಾಜು ದೊಡ್ಡನ್ನವರ, ಮಹಾವೀರ ಸುಗಣ್ಣವರ, ವ್ಯವಸ್ಥಾಪಕ ರವೀಂದ್ರ ಜಾಡರ, ಅಧಿಕಾರಿಗಳಾದ ಕೌತುಕ ಮಗ್ಗೆಣ್ಣವರ, ವಿದ್ಯಾಧರ ಧೊಂಡಾರೆ, ಮಹಾವೀರ ಬಿರನಾಳೆ, ಬಿ.ಡಿ.ಯಳಗುಡ, ವಿನಯ ನಾಗಾವೆ, ಸೇರಿದಂತೆ ಅನೇಕರು ಇದ್ದರು.