Banglore

ಶಾಲೆ ಬಂದ್ ಮಾಡಿದ್ದಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ವಿರೋಧ

Share

ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಅಂತಾ ಮಾಡದೇ ಎಲ್ಲರಿಗೂ ಒಂದೇ ನಿಯಮ ಇಡಬೇಕು. ಓರ್ವ ಡಿಸಿ ಶಾಲೆ ಬಂದ್ ಮಾಡಬೇಕು ಎಂದರೆ ಮತ್ತೊರ್ವ ಡಿಸಿ ಶಾಲೆ ನಡೆಸಬೇಕು ಎನ್ನುತ್ತಾರೆ ಇದು ತಪ್ಪು. ಶಾಲೆ ನಡೆಸಬೇಕೋ ಇಲ್ಲವೋ ಎಂಬ ಬಗ್ಗೆ ಒಂದು ಸ್ಪಷ್ಟವಾದ ನಿರ್ಧಾರ ಸರ್ಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓಗಳು, ಡಿಡಿಪಿಐಗಳು, ಮುನ್ಸಿಪಲ್ ಕಾರ್ಪೋರೇಶನ್‍ನವರಿಗೆ ಜವಾಬ್ದಾರಿ ವಹಿಸಿ, ಅಂತರ ಕಾಯ್ದುಕೊಂಡು ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಮಕ್ಕಳಿಗೆ ಪಾಠ ಮಾಡುವುದು ಒಳ್ಳೆಯದು. ಇಲ್ಲದೇ ಹೋದ್ರೆ ಶಾಲೆಗೆ ಹೋಗದಿದ್ದರೂ ಪಾಸ್ ಆಗುತ್ತೇವೆ ಎಂದು ಮಕ್ಕಳಿಗೆ ರೂಢಿಯಾಗಿ ಬಿಡುತ್ತದೆ.

ಮತ್ತಷ್ಟು ದಿನ ಶಾಲೆ ಸೂಟಿ ಆಗಲಿ ಎನ್ನುತ್ತಾರೆ. ಹೀಗಾಗಿ 6ನೇ ತರಗತಿಯಿಂದ ನಿಯಮ ಪ್ರಕಾರ ನಡೆಸಿದ್ರೆ ಯಾವುದೇ ತೊಂದರೆ ಆಗುವುದಿಲ್ಲ. ಒಂದೆರಡು ಮಕ್ಕಳಿಗೆ ಸೋಂಕು ತಗಲಿದ್ರೆ ತಕ್ಷಣವೇ ಅವರನ್ನು ಐಸೋಲೇಶನ್‍ನಲ್ಲಿ ಇಟ್ಟು ಚಿಕಿತ್ಸೆ ಕೊಡಬೇಕು ಎಂದು ಸಲಹೆ ನೀಡಿದರು.

Tags:

error: Content is protected !!