ಕೊವಿಡ್ ಲಸಿಕೆಯನ್ನು ಯಾರು ತೆಗೆದುಕೊಂಡಿಲ್ಲವೋ ಅವರ ಮೇಲೆ ಈ ಒಮಿಕ್ರಾನ್ ಪ್ರಭಾವ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಕೆ ಸುಧಾಕರ್‍ರವರು, ಕೊವಿಡ್ ಲಸಿಕೆಯನ್ನು ಯಾರು ಪಡೆದಿಲ್ಲವೋ ಅಂಥವರಿಗೆ ಈ ಹೊಸ ತಳಿ ಒಮಿಕ್ರಾನ್ ಹೆಚ್ಚಿ ಪ್ರಭಾವ ಬೀರುತ್ತಿದೆ. ಇದು ಇಡೀ ಜಗತ್ತಿಗೇ ತಿಳಿದ ವಿಷಯವಾಗಿದೆ. ಇನ್ನು ಲಸಿಕೆಯನ್ನು ಉದ್ದೇಶಪೂರ್ವಕವಾಗಿ ಕೆಲವರು ತೆಗೆದುಕೊಂಡಿಲ್ಲ. ಇನ್ನು ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇದಾವರು ಸುಮಾರು 45ಲಕ್ಷಜನ ಇದ್ದಾರೆ. ಅಂಥವರು ತಕ್ಷಣ ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕು. ಇನ್ನು ಜನತೆಯ ಆರೋಗ್ಯ ಸರಕಾರಕ್ಕೆ ಬಹಳ ಮುಖ್ಯ ಎಂದರು.
ಇನ್ನು ಮಕ್ಕಳಿಗೆ ಕೊವಿಡ್ ಲಸಿಕೆಯನ್ನು ನೀಡಿಲ್ಲ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇನ್ನು ನಮ್ಮ ರಾಜ್ಯದಲ್ಲಿ32ಲಕ್ಷ ಮಕ್ಕಳಿದ್ದಾರೆಂದು ಅಂದಾಜಿಸಲಾಗಿದೆ. ಅವರಲ್ಲಿ ಈಗಾಗಲೇ 50ರಷ್ಟು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ. ಅವರಿಗೆ ಒಂದು ತಿಂಗಳ ಒಳಗೆ ಎರಡನೇ ಡೋಸನ್ನೂ ಕೂಡ ನೀಡಲಾಗುವುದು. ಇನ್ನು 1ರಿಂದ 14ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಲ್ಲ. ಹಾಗಾಗಿ ಯಾರ್ಯಾರು ಲಸಿಕೆಯನ್ನು ಪಡೆದಿಲ್ಲವೋ ಅವರೆಲ್ಲ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು.
ಇನ್ನು ಕೊವಿಡ್ ಲಸಿಕೆ ಸಮಸ್ಯೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಲಸಿಕೆಯ ಸಮಸ್ಯೆಇಲ್ಲ. ಈಗಾಗಲೇ ನಮ್ಮ ಬಳಿ ಸುಮಾರು 65ಲಕ್ಷ ಡೋಸ್ ಲಸಿಕೆ ಇದೆ. ಇನ್ನು ಸಂಪೂರ್ಣ ;ಲಸಿಕಾಕರಣವಾಗದೇ ಈ ರೋಗವನ್ನು ವಿಶ್ವದಿಂದ ಹೊರದೂಡಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಇದನ್ನು ಮನಗಂಡ ನಮ್ಮ ಪ್ರಧಾನಿ ನರೇಂದ್ರ ಮೋದಿರವರು ನಮ್ಮ ಅಕ್ಕಪಕ್ಕದ ರಾಷ್ಟ್ರಗಳಿಗೆ ಹಾಗೂ ಕಡು ಬಡವ ರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ ಎಂದು ಪದರಶಂಸೆ ವ್ಯಕ್ತಪಡಿಸಿದರು.
ಇನ್ನು ಈಗಾಗಲೇ ಪ್ರಪಂಚದಾದ್ಯಂತ ಒಮಿಕ್ರನಾ ಹಾವಳಿ ಹೆಚ್ಚಾಗುತ್ತಿದೆ. ಹಾಗಾಗಿ ಸರಕಾರ ಎಲ್ಲರಿಗೂ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವಂತೆ ಪದೇ ಪದೇ ಹೇಳುತ್ತಿದೆ. ಇನ್ನು ಎಲ್ಲರೂ ವ್ಯಾಕ್ಸಿನ್‍ನ್ನು ಪಡೆದು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ ಎಂಬುದು ಎಲ್ಲರ ಆಶಯ