ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜಿಲ್ಲಾಡಳಿತ ಅದನ್ನು ತಡೆಯುವಲ್ಲಿ ನಿರ್ಲಕ್ಷ ಧೋರಣೆಯನ್ನು ಅನುಸರಿಸುತ್ತಿದೆ. ಇನ್ನು ನಗರದಲ್ಲಿ ಇಂದು ವೀಕೆಂಡ್ ಕಫ್ರ್ಯೂ ಇದ್ದರೂ ಸಾರ್ವಜನಿಕರು ಮಾಸ್ಕ್ ಹಾಕದೇ ಎಲ್ಲಂದರಲ್ಲಿ ತಿರುಗಾಡುತ್ತಿದ್ದು ಜಿಲ್ಲಾಡಳಿತ ಕಣ್ಣುಮುಚ್ಚಿಕೊಂಡು ಕುಳಿತಿದೆ.

ಬೆಳಗಾವಿ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನತೆ ಕ್ಯಾರೆ ಎನ್ನುತ್ತಿಲ್ಲ. ವೀಕೆಂಡ್ ಕಫ್ರ್ಯೂ ಎರಡನೇ ದಿನವೂ ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಚೆಕಿಂಗ್ ಪಾಯಿಂಟ್‍ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿಲ್ಲ. ಬೆಳಗಾವಿ ನಗರದಲ್ಲಿ ಬಿಂದಾಸ್ ಆಗಿ ವಾಹನಗಳ ಸಂಚಾರ ನಡೆದೇ ಇದೆ. ಬೆಳಗಾವಿ ನಗರ ಪ್ರವೇಶಿಸುವ ಮುಖ್ಯವಾದ ಅಶೋಕ ವೃತ್ತದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿಲ್ಲ. ಬ್ಯಾರಿಕೇಡ್ ಹಾಕಿ ಒಂದು ಬದಿ ರಸ್ತೆ ಬಂದ್ ಮಾಡಿರುವ ಪೆÇಲೀಸರು ಏಕಮುಖ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ಆದ್ರೆ ಯಾವುದೇ ರೀತಿಯ ಪರಿಶೀಲನೆಯನ್ನು ಮಾಡದ ಹಿನ್ನೆಲೆ ಮಾಸ್ಕ್ ಧರಿಸದೇ ಸಾರ್ವಜನಿಕರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಕಟ್ಟುನಿಟ್ಟಿನ ವೀಕೆಂಡ್ ಕಫ್ರ್ಯೂ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ನಿರ್ಲಕ್ಷ್ಯ ಭಾವನೆ ತೋರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆಯೂ 70 ಜನರಿಗೆ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 419 ಕೋವಿಡ್ ಪಾಸಿಟಿವ್ ಆ್ಯಕ್ಟೀವ್ ಕೇಸ್ ಇವೆ. ದಿನೇ ದಿನೇ ಸೋಂಕು ಹೆಚ್ಚುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳದೇ ದಿವು ನಿರ್ಲಕ್ಷ ತಳೆದಿದೆ.
ಇನ್ನು ಈ ವೇಳೆ ಮಾತನಾಡಿದ ಸಾರ್ವಜನಿಕ ಗಿರೀಶ್ ಮಳಲಿ, ವೀಕೆಂಡ್ ಲಾಕ್‍ಡೌನ್ ವ್ಯಾಪಾರಸ್ಥರಿಗೆ ನಷ್ಟವಾಗಲಿದೆ. ಇನ್ನು ಜನರ ಆರೋಗ್ಯದ ದೃಷ್ಟಿಯಿಂದ ಅದು ಒಳ್ಳೆಯದು. ಜನತೆ ಅನಗತ್ಯವಾಗಿ ಓಡಾಡಬಾರದು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು.
ಇದೇ ವೇಳೆ ಮಾತನಾಡಿದ ಇನ್ನೋರ್ವ ಸಾರ್ವಜನಿಕರು, ಲಾಕ್‍ಡೌನ್ ಮಾಡಬೇಕು. ದೇಶಾದ್ಯಂತ ಖಾಯಿಲೆ ಬಂದಿರುವುದರಿಂದ ಸರಕಾರ ತೆಗೆದುಕೊಂಡ ನಿರ್ಧಾರ ಚೆನ್ನಾಗಿದೆ. ಜನ ಒಂದೆಡೆ ಸೇರೋದನ್ನು ದೂರಮಾಡಬೇಕು. ವ್ಯಾಪಾರಸ್ಥರಿಗೆ ಇದರಿಂದ ತೊಂದರೆಯಾದರೂ ಇದು ಅನಿವಾರ್ಯ ಎಂದರು.
ಇನ್ನು ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಸರಕಾರ ಕಠಿಣ ನಿಯಮಗಳನ್ನು ರಾಜ್ಯಾದ್ಯಂತ ತರುವ ಚಿಂತನೆ ನಡೆಸಿದೆ. ಇನ್ನು ಈ ಕುರಿತಂತೆ ಸರಕಾರ ಸರ್ವಜನಿಕರ ಸುರಕ್ಷತೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.