ಬೆಳಗಾವಿ ಸದಾಶಿವ ನಗರದಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದದಿನಕ್ಕೆ ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ಎದುರಿಗಿನ ೩ ಅಂಗಡಿಗಳಲ್ಲಿ ಕೈಚಳಕ ತೋರಿಸಿದ ಕಳ್ಳರು ಇಂದು ತರಕಾರಿ ಅಂಗಡಿಗೂ ಕನ್ನ ಹಾಕಿದ್ದಾರೆ. ಹಣ ಹೆಚ್ಚು ಸಿಗದ ಹಿನ್ನೆಲೆ ದಿನಸಿ ಹೊತ್ತೊಯ್ದಿದ್ದಾರೆ.

ಹೌದು ಬೆಳಗಾವಿ ಸದಾಶಿವ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ವೃತ್ತದ ಬಳಿಯ ಬಾಬು ಲಾಂಡೆಯವರ ಅನ್ನಪೂರ್ಣಾ ವೆಜಿಟೇಬಲ್ ಶಾಪ್‌ಗೆ ಕಳೆದ ರಾತ್ರಿ ಕಳ್ಳರು ಕನ್ನ ಹಾಕಿದ್ದಾರೆ. ರಾತ್ರಿ ವೇಳೆ ಅಂಗಡಿಯ ಸಿಮೆಂಟ್ ಪತ್ರಾಸ್ ಕತ್ತರಿಸಿ ಒಳ ಪ್ರವೇಶಿಸಿದ ಕಳ್ಳರು ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚಿನ ಹಣ ಸಿಗದ ಕಾರಣ ಎಣ್ಣೆ ಪಾಕೀಟು, ಗೋಧಿ ಹಿಟ್ಟು, ಚಿಲ್ಲರೆ ಹಣ ಎಗರಿ ಪರಾರಿಯಾಗಿದ್ದಾರೆ. ಇದರಿಂದ ಸುಮಾರು ೧೫ ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ. (ಫ್ಲೋ)
ಅನ್ನಪೂರ್ಣ ವೆಜಿಟೇಬಲ್ ಶಾಪ್‌ನಲ್ಲಿ ಈ ಮೊದಲು ೨ ಬಾರಿ ಕಳ್ಳತನವಾಗಿತ್ತು, ಈಗ ಮತ್ತೆ ಕಳ್ಳತನವಾಗಿದೆ. ಅಲ್ಲದೇ ಕಳೆದ ತಿಂಗಳಿನಲ್ಲಿ ಎದುರಿಗಿನ ಶೇಖರ್ ಪಾನ್‌ಶಾಪ್, ಮೆಡಿಕಲ್ ಹಾಗೂ ಹಾಟ್ ಚಿಪ್ಸ್ ಶಾಪ್‌ನಲ್ಲಿ ಕಳ್ಳತನವಾಗಿತ್ತು. ಈ ತರಕಾರಿ ಅಂಗಡಿಯಲ್ಲಿಯೂ ಕಳ್ಳತನವಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.