ವೀಕೆಂಡ್ ಕರ್ಪ್ಯೂಗೆ ಹುಬ್ಬಳ್ಳಿಯಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರೆತಿದೆ ಬೆಳಗಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಪೊಲೀಸ್ ಇಲಾಖೆ ಕೂಡ ವಾಹನಗಳ ತಪಾಸಣೆ ಮಾಡುವ ಮೂಲಕ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿತು ಇಂದು ಹುಬ್ಬಳ್ಳಿ ಬೆಳಗ್ಗೆಯಿಂದಲೇ ಸ್ತಬ್ಧವಾಗಿತ್ತು.

ರಾಜ್ಯ ಸರ್ಕಾರ ಹೊರಡಿಸಿರುವ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಗೆ ಈಗಾಗಲೇ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಹುಬ್ಬಳ್ಳಿ ಹೃದಯಭಾಗದ ಚನಮ್ಮ ವೃತ್ತದಲ್ಲಿ ಬ್ಯಾರಿಕೇಟ್ ನಿರ್ಮಿಸಿ ಬಿಗಿಬಂದೋಬಸ್ತ್ ಮಾಡಿದ್ದರು.
ಕೇವಲ ತುರ್ತು ವಾಹನಗಳಿಗೆ ಮತ್ತು ಸರ್ಕಾರದ ಆದೇಶ ನೀಡಿರುವ ವಾಹನಗಳು ಓಡಾಡಲು ಮಾತ್ರ ಅವಕಾಶ ಮಾಡಿಕೊಟ್ಟಿದ್ದು ಇನ್ನುಳಿದಂತೆ ಯಾವುದೇ ಖಾಸಗಿ ವಾಹನಗಳನ್ನು ಓಡಾಡದಂತೆ ಬಿಗಿ ಬಂದೋಬಸ್ತ್ ಮಾಡಿದ್ದರು.