ವಿಧಾನಸಭೆಯ ಉಪಸಭಾಪತಿ ಹಾಗೂ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ ಮಾಮನಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಇಂದು ಮಂಗಳವಾರ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಹುಟ್ಟುಹಬ್ಬ. ಅವರ ಸ್ವ ಗ್ರಹದಲ್ಲೇ ಅದ್ಧೂರಿ ಬರ್ತಡೆ ಆಚರಣೆ ಮಾಡಲಾಗಿತ್ತು. ಈ ವೇಳೆ ನೂರಾರು ಜನ ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಸೇರಿಕೊಂಡು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನಿತ್ಯ ನೂರಾರು ಕೊರೊನಾ ಕೇಸ್ ಪತ್ತೆ ಆಗುತ್ತಿದ್ದರೂ ಕ್ಯಾರೆ ಎನ್ನದ ಶಾಸಕ ಮಾಮನಿ, ಈ ಕೋವಿಡ್ ಸಂದರ್ಭದಲ್ಲಿಯೂ ಅದ್ಧೂರಿಯಾಗಿ ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸದೇ ಬರ್ತ್‍ಡೇ ಮಾಡಿಕೊಂಡಿದ್ದಾರೆ. ಈ ವೇಳೆ ತಂಡೋಪ ತಂಡವಾಗಿ ಕ್ಷೇತ್ರದ ಜನ ಆಗಮಿಸಿ ಶುಭ ಕೋರುತ್ತಿದ್ದರು. ಈ ವೇಳೆ ಶಾಸಕರಾಗಲಿ ಅವರ ಅಭಿಮಾನಿಗಳಾಗಲೀ ಯಾರೂ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೊವಿಡ್ ರೂಲ್ಸ್‍ಗಳನ್ನು ಗಾಳಿಗೆ ತೂರಿ ಹುಟ್ಟುಹಬ್ಬ ಆಚರಿಸಿದ್ದಾರೆ. ಜನರಿಗೆ ಈ ಸಂದರ್ಭದಲ್ಲಿ ತಿಳಿವಳಿಕೆ ನೀಡಬೇಕಿದ್ದ ಡೆಪ್ಯುಟಿ ಸ್ಪೀಕರ್ ಅವರಿಂದಲೇ ಕೋವಿಡ್ ನಿಯಮ ಉಲ್ಲಂಘನೆಯಾಗಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ? ಎಂದು ಜನರು ಉಪಸಭಾಪತಿ ಆನಂದ ಮಾಮನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.