ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗುಲಿ ನಾಲ್ಕು ಅಂಗಡಿಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಇರುವ ಅಂಗಡಿಗಳಲ್ಲಿ ನಡೆದಿದೆ. ಬೈಕ್ ರಿಪೇರಿ ಗ್ಯಾರೇಜ್, ಮೊಬೈಲ್ ಶಾಪ್, ಪಾನಶಾಪ್, ಕಟಿಂಗ್ ಶಾಪ್ ಈ ನಾಲ್ಕು ಅಂಗಡಿಗಳಿಗೆ ಬೆಂಕಿ ತಗುಲಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಅವಘಡ ಎಂದು ಶಂಕೆ ವ್ಯಕ್ತವಾಗಿದೆ. ಅಂಗಡಿಗಳಲ್ಲಿದ್ದ ಮೂರ್ನಾಲ್ಕು ಬೈಕ್ ಗಳು, ಹಲವು ಮೊಬೈಲ್ ಗಳು, ಫರ್ನಿಚರಗಳು ಬೆಂಕಿಗಾಹುತಿಯಾಗಿವೆ. ರಾತ್ರಿಯೇ ಆಗಮಿಸಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಪ್ಪಿಸಿದ್ದಾರೆ. ಐದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ ವಾಗಿವೆ. ತಿಕೋಟಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
