COVID-19

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು: ಸರಕಾರದ ನಿರ್ಧಾರಕ್ಕೆ ಕಾಯ್ತಾ ಇವೆ ಶಿಕ್ಷಣ ಸಂಸ್ಥೆಗಳು, ಪಾಲಕರು

Share

ರಾಜ್ಯದಲ್ಲಿ ಕೊರೊನಾ ಮತ್ತೆ ಅಬ್ಬರಿಸುತ್ತಿದೆ. ಕೊರೊನಾ ವಿದ್ಯಾರ್ಥಿಗಳಲ್ಲಿಯೂ ವಕ್ಕರಿಸುತ್ತಿದೆ. ವಿದ್ಯಾರ್ಥಿಗಳಿಗೆ, ಪಾಲಕರಿಗೆ ಅಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಗಳಿಗೂ ತಲೆ ನೋವಾಗಿ ಪರಿಣಮಿಸಿದೆ. ಶಾಲೆಗಳು ಮತ್ತೆ ಮುಚ್ಚುತ್ತವೆಯಾ? ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಹೇಗೆ ಎಂಬ ಆತಂಕ ಮನೆ ಮಾಡಿದೆ. ಗುಮ್ಮಟನಗರಿ ಯಲ್ಲಿಯೂ ಇತ್ತಿಚೆಗೆ ಶಾಲಾ ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರ ಜಿಲ್ಲೆಯಲ್ಲಿ 15 ವರ್ಷದ ಒಳಗಿನ ಮಕ್ಕಳಲ್ಲಿ ಯೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಜನವರಿ 1ರಿಂದ 9ರವರೆಗೆ ಇಲ್ಲಿಯವರೆಗೆ 32 ಮಕ್ಕಳಿಗೆ ಕೊರೊನಾ ಅಟ್ಯಾಕ್ ಮಾಡಿದೆ. ಅದರಲ್ಲಿ 2ರಿಂದ 5ವರ್ಷದ 2ಮಕ್ಕಳಿಗೆ 6ರಿಂದ 10ವರ್ಷದ 5 ಹಾಗೂ 11ರಿಂದ 15ವರ್ಷದ ಒಳಗಿನ 25ಮಕ್ಕಳು ಸೇರಿ ಒಟ್ಟು 32 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಗಮನಿಸಿದಾಗ ವಿದ್ಯಾರ್ಥಿಗಳಿಗೆ ಕೊರೊನಾ ಹೆಮ್ಮಾರಿ ವಕ್ಕರಿಸಿರೋದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಗುಮ್ಮಟನಗರಿಯ ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸಿ ತರಗತಿ ಬೋಧಿಸಲಾಗುತ್ತಿದೆ. ಶಾಲೆಗಳಲ್ಲಿ ಕೊರೊನಾ ಸೋಂಕು ಹರಡವಮಬಾರದು ಎಂಬ ಉದ್ದೇಶದಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಜೊತೆಗೆ ಸಾಮಾಜಿಕ ಅಂತರ ಹಾಗೂ ಸೈನಿಟೇಜರ್ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಶಾಲೆಗಳ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೊವಿಡ್ ಲಸಿಕೆ ಹಾಕಿಸಲಾಗಿದ್ದು ಎರಡು ಡೋಜ್ ಪಡೆದವರ ಸೇವೆ ಮಾತ್ರ ಪಡೆಯಲಾಗುತ್ತಿದೆ. ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗೆ ಜ್ವರ ಅಥವಾ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಪಾಲಕರ ಜೊತೆಯಲ್ಲಿ ಅವರನ್ನು ಮನೆಗೆ ಕಳುಹಿಸಿ ಕೊಡಲಾಗುತ್ತಿದೆ. ಇನ್ನೂ ಶಾಲಾ ಮಂಡಳಿಗಳು ತರಗತಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಿ ಸೋಶಿಯಲ್ ಡಿಸ್ಟೆನ್ಸ್ ಮೆಂಟೆನ್ ಮಾಡಲಾಗುತ್ತಿದೆ. ಇನ್ನೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಂಡರು ಅದನ್ನು ಪಾಲಿಸುವದದಾಗಿ ಶಿಕ್ಷಣ ಸಂಸ್ಥೆಗಳವರು ಹೇಳುತ್ತಿದ್ದಾರೆ‌. ಅಲ್ಲದೇ ಪಾಲಕರು ಕೂಡಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಮನವಿ ಮಾಡುತ್ತಿದ್ದಾರೆ.

ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವದಕ್ಕೆ ಪಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಎರಡು ವರ್ಷಗಳಿಂದ ಕೊರೊನಾ ಕಾಡಿ, ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ. ಈಗೀಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ಮತ್ತೆ ಕೊರೊನಾ ರೂಪಾಂತರ ಹೊಂದಿ ಓಮಿಕ್ರಾನ್ ಆಗಿ ಬದಲಾಗಿ ಬಂದು ವಕ್ಕರಿಸಿದೆ. ಮತ್ತೆ ಸರಕಾರ ಅದೇನೋ ನಿರ್ಧಾರ ತೆಗೆದುಕೊಳ್ಳುತ್ತೊ ಅನ್ನೊ ಭಯ ಪಾಲಕರಲ್ಲಿದೆ. ಕೆಲ ಪಾಲಕರು ಶಾಲೆ ಮುಚ್ಚಿ ಎಂದರೆ ಕೆಲವರು ಬೇಡಾ ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರ‌ಮ ಪಾಲಿಸಲಾಗುತ್ತಿದೆ‌. ಅಲ್ಲದೇ 15 ರಿಂದ18 ವರ್ಷದ ಮಕ್ಕಳಿಗೆ ಕೊವಿಡ್ ಲಸಿಕೆ ಹಾಕಿಸಿದ್ದಿವಿ.‌ಅದ್ಯಾಗೂ ಸರಕಾರದ ನಿರ್ಧಾರಕ್ಕೆ ಬದ್ದರಾಗ್ತಿವಿ ಎನ್ನುತ್ತಾರೆ ಪಾಲಕರು.

ಒಟ್ನಲ್ಲಿ ಹೋದೆಯಾ ಪಿಶಾಚಿ ಎಂದ್ರೆ ಬಂದೆ ಗವಾಕ್ಷಿಲಿ ಅನ್ನೊ ಹಾಗೆ ಕೊರೊನಾ ವಕ್ಕರಿಸಿದೆ. ಸರಕಾರದ ನಿರ್ಧಾರಕ್ಕೆ ಕಾಯುವಂತಾಗಿದೆ. ಸರಕಾರದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಅದ್ಯಾವ ನಿರ್ಧಾರ ಕೈಗೊಳ್ಳುತ್ತೊ ಕಾದು ನೋಡಬೇಕಿದೆ.

Tags:

error: Content is protected !!