ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇತ್ತ ಗುಮ್ಮಟನಗರಿ ವಿಜಯಪುರಕ್ಕಿಗ ಮುಂಬೈ ಮಹಾಮಾರಿ ಕಂಟಕ ಎದುರಾಗಿದೆ.ಮಹಾರಾಷ್ಟ್ರದ ಮುಂಬೈ ಮಹಾನಗರದಲ್ಲಿ ಕೊರೊನಾ ಹೊತ್ತಿ ಉರಿಯುತ್ತಿದೆ. ತಪಾಸಣೆ ಇಲ್ಲ, RTPCR ಚೆಕ್ ಇಲ್ಲ ಹಾಗೇಯೆ ಮುಂಬೈ ಪ್ರಯಾಣಿಕರು ಬಿಂದಾಸ್ಸಾಗಿ ವಿಜಯಪುರಕ್ಕೆ ಎಂಟ್ರಿ ಕೊಡ್ತಿದ್ದಾರೆ.

ನಿತ್ಯ ರೈಲ್ವೇ ಮೂಲಕ ಮಹಾರಾಷ್ಟ್ರದಿಂದ ತಂಡೋಪ ತಂಡವಾಗಿ ಮುಂಬೈನಿಂದ ಬರ್ತಿದ್ದಾರೆ. ಜಿಲ್ಲಾಡಳಿತ ಕೊರೊನಾ ತಡೆಗೆ ಮಹಾರಾಷ್ಟ್ರದ 11 ಗಡಿಗಳಲ್ಲಿ ಚೆಕ್ ಪೋಸ್ಟ್ ತೆರೆದಿದೆ. ಇಲ್ಲಿ ನೋಡಿದ್ರೆ ಪ್ರಯಾಣಿಕರು ರೈಲ್ವೇ ಮೂಲಕ ಆಗಮಿಸುವ ಮಹಾರಾಷ್ಟ್ರದ ಮುಂಬೈ ಪ್ರಯಾಣಿಕರ ತಪಾಸಣೆ ಮಾಡುತ್ತಿಲ್ಲಾ. ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳು ಬಾರೀ ನಿರ್ಲಕ್ಷ್ಯ ವಹಿಸಿ ಬರೋರ ಸ್ಕ್ಯಾನಿಂಗ್ ಇಲ್ಲ..
ಸ್ವ್ಯಾಬ್ ಕಲೆಕ್ಷನ್ ಮಾಡ್ತಿಲ್ಲಾ, ಮಂಬೈ ಪ್ರಯಾಣಿಕರನ್ನ ಹೇಳೋರು ಕೇಳೋರೆ ಇಲ್ಲ ಎನ್ನುವಂತಾಗಿದೆ. ಮಹಾರಾಷ್ಟ್ರದಿಂದ ಬರೋರ ಕನಿಷ್ಠ ತಪಾಸಣೆಗು ನಿಲ್ದಾಣದಲ್ಲಿ ಅಧಿಕಾರಿಗಳಿಲ್ಲದಿರುವದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.