Vijaypura

ವಿಜಯಪುರದಲ್ಲಿ ಶಾಲಾ ಮೇಲ್ಛಾವಣಿ ಪ್ಲಾಸ್ಟರ್ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ

Share

ಶಾಲಾ ಮೇಲ್ಛಾವಣಿಯ ಪ್ಲ್ಯಾಸ್ಟರ್ ಕುಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ನಂದಿಹಾಳ್ ಗ್ರಾಮದಲ್ಲಿ ನಡೆದಿದೆ.

ವಿಜಯಪುರದ ನಂದಿಹಾಳ್ ಪಿಯು ಗ್ರಾಮದ ಸರಕಾರಿ ಶಾಲೆಯಲ್ಲಿ ಬೆಳಗಾವಿನ ಜಾವ 11ಗಂಟೆ ಸುಮಾರಿಗೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದಿದೆ. ತರಗತಿಯ ಕಿಟಕಿಯ ಪಕ್ಕದ ಭಾಗದಲ್ಲಿದ್ದ ಪ್ಲಾಸ್ಟರ್ ಕುಸಿದಿದ್ದು ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಇನ್ನು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಇನ್ನು ತರಗತಿಯಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇನ್ನು ಶಾಲೆಯ ಈ ಕರುಣಾಜನಕ ಸ್ಥಿತಿಯ ಕುರಿತಂತೆ ಗ್ರಾಮಸ್ಥರು ಅನೇಕ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಶಿಕ್ಷಣ ಇಲಾಖೆ ಈ ಕುರಿತಂತೆ ಗಮನ ಹರಿಸಿರಲಿಲ್ಲ.

 

Tags:

error: Content is protected !!