ವಿಕೇಂಡ್ ಕರ್ಫ್ಯೂ ಅಗತ್ಯವಿಲ್ಲ. ಆರ್ಥಿಕತೆಯೂ ಸಾಗಬೇಕು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಹೀಗಾಗಿ ಸರ್ಕಾರ ನೋಡಿಕೊಂಡು ತೀರ್ಮಾನ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು 15-18 ಒಳಗಿನ ವಯೋಮಾನದ ಮಕ್ಕಳ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ವಿಕೇಂಡ್ ಕರ್ಫ್ಯೂ ಬಗ್ಗೆ ಸಿಎಂ ಅವರಿಗೂ ಕೂಎ ವಯುಕ್ತಿಕ ಸಲಹೆ ನೀಡ್ತಿದ್ದೇನೆಮವಿಕೇಂಡ್ ಕರ್ಫ್ಯೂ
ಸಡಿಲಿಕೆ ಮಾಡಬೇಕು. ಗುರುವಾರ,ಶುಕ್ರವಾರ ಸಭೆ ಇದೆ ವಾರಂತ್ಯ ಕರ್ಫ್ಯೂಬಗ್ಗೆ ನಿರ್ಧಾರ ಮಾಡಲಿ ಎಂದರು.
ಕೇರಳ ಸರ್ಕಾರ ನಾರಾಯಣ ಗುರುಗಳ ಸ್ತಬ್ದ ಚಿತ್ರ ರಿಜೆಕ್ಟ್ ಮಾಡಲಾಗಿದೆ ಎನ್ನುವ ಬಗ್ಗೆ ಸುಳ್ಳು ಸುದ್ದಿ ಹರಡಿಸಲಾಗುತ್ತೆ.
ಕೇರಳ ರಾಜ್ಯ ಕೆಲವು ನಿಯಮಗಳನ್ನ ಪೂರ್ತಿ ಮಾಡಿರಲಿಲ್ಲ. ಅಲ್ಲದೆ ಕಳೆದೆರೆಡೂ ವರ್ಷಗಳಿಂದ ಕೇರಳ ಆಯ್ಕೆಯಾಗಿತ್ತು.
ಇದರಲ್ಲಿ ಸರ್ಕಾರದ ಪಾತ್ರ ವಿಲ್ಲ.
ಅಲ್ದೆ ಕೇಂದ್ರ ಶಂಕರಾಚಾರ್ಯರ ಟ್ಯಾಬ್ಲೋ ಕಳಿಸಿ ಎನ್ನೋ ಸುಳ್ಳು ಸುದ್ದಿಯನ್ನ ಹರಡಿಸಲಾಗುತ್ತಿದೆ.
ಸಿದ್ದರಾಮಯ್ಯನವರಂತವರ ಈ ರೀತಿ ಸುಳ್ಳು ಹೇಳ್ತಿದ್ದಾರೆ. ಸುಮ್ನೆ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದರು.
ಪಂಚರಾಜ್ಯ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾವು ನಾಲ್ಕು ರಾಜ್ಯದಲ್ಲಿ ಅಧಿಕಾರದಲ್ಲಿದ್ದೆವೆ.
ಯಾರೊಬ್ಬೊರು ಪಾರ್ಟಿ ಬಿಟ್ರೆ ಇಡೀ ಫಲಿತಾಂಶದ ಮೇಲೆ ಪರಿಣಾಮ ಬೀರಲ್ಲ.
ಎಲ್ಲಾ ಸಮೀಕ್ಷೆಯಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನೋ ಮಾಹಿತಿ ಇದೆ.
ನಾಲ್ಕು ರಾಜ್ಯಗಳಲ್ಲಿ ನಮ್ಮ ಪರ ಅಲೆಯಿದೆ. ಅನೇಕರು ಪಾರ್ಟಿ ಬಿಟ್ರೂ ನಾವು ಕಳೆದ ಭಾರಿ ಅಧಿಕಾರಕ್ಕೆ ಬಂದ್ವಿ.
ಉತ್ಪಲ್ ಪರಿಕ್ರರ್ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ. ಅಲ್ಲಿನ ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ವ್ಯಾಕ್ಸಿನ್ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ…
ಕಿಲ್ಲರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಸಿಕಾ ಅಭಿಯಾನ ಈಗ 15ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುತ್ತಿದ್ದು, ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಹುಬ್ಬಳ್ಳಿಯ ಕೇಶ್ವಾಪೂರದ ಫಾತಿಮಾ ಶಾಲೆಯಲ್ಲಿ 15 ರಿಂದ 18 ವರ್ಷರ್ದಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದ ಕಾರ್ಯಕ್ರಮ ವೀಕ್ಷಣೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಗತ್ತು ಈಗ ಭಾರತವನ್ನು ನಿಬ್ಬೆರಗಾಗಿ ನೋಡುವಂತಾಗಿದೆ. ಎಲ್ಲ ರಾಷ್ಟ್ರಗಳಿಗಿಂತ ತಡವಾಗಿ ಭಾರತಕ್ಕೆ ವ್ಯಾಕ್ಸಿನ್ ಬಂದಿದ್ದರೂ ಎಲ್ಲ ದೇಶಕ್ಕಿಂತ ಹತ್ತರಷ್ಟು ನಾವು ಮುಂದಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.