Chikkodi

ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ ನಕಲಿ ಪೊಲೀಸನಿಗೆ ಬಿತ್ತು ಗೂಸಾ

Share

ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ ನಕಲಿ ಪೊಲೀಸಪ್ಪನಿಗೆ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಅಂಕಲಿ ಗ್ರಾಮದ ಹೊರವಲಯದ ಚಿಕ್ಕೋಡಿ ರಸ್ತೆಯ ಕೇರೂರ ಕ್ರಾಸ್‌ ಬಳಿ ವಾಹನಗಳನ್ನು ತಡೆದು ನಕಲಿ ಪೊಲೀಸೊಬ್ಬ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದನು.ಅನುಮಾನ ಬಂದ ವಾಹನ ಸವಾರರು ಮತ್ತು ಸ್ಥಳೀಯರು ವಿಚಾರಿಸಿದಾಗ ಈತ ನಕಲಿ ಪೊಲೀಸ್ ಎಂದು ಬೆಳಕಿಗೆ ಬಂದಿದೆ.ಎಲ್ಲರೂ ಆತನಿಗೆ ಥಳಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ನಕಲಿ ಪೊಲೀಸ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂಕಲಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!