Belagavi

ಲಾಠಿ ಬಿಟ್ಟು ಮೈಕ್ ಹಿಡಿದು ಕೋವಿಡ್ ಬಗ್ಗೆ ಬೆಳಗಾವಿ ಪೊಲೀಸರ ಜಾಗೃತಿ

Share

ಬೆಳಗಾವಿಯಲ್ಲಿ ನಗರ ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಠಿಯನ್ನು ಪಕ್ಕಕ್ಕೆ ಇಟ್ಟು, ಕೈಯ್ಯಲ್ಲಿ ಮೈಕ್ ಹಿಡಿದು ಸಾರ್ವಜನಿಕರಲ್ಲಿ ಕೊವಿಡ್ ಮುಂಜಾಗೃತೆ ಹಾಗೂ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಬೆಳಗಾವಿ ನಗರ ಪೊಲೀಸರು ಲಾಠಿಯನ್ನು ಪಕ್ಕಕ್ಕೆ ಇಟ್ಟು ಕೈಯ್ಯಲ್ಲಿ ಮೈಕ್ ಹಿಡಿದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಡಿಸಿಪಿ ಪಿ.ವಿ ಸ್ನೇಹಾ ನೇತೃತ್ವದಲ್ಲಿ ಬೆಳಗಾವಿ ನಗರದ ಪ್ರಮುಖ ಏರಿಯಾಗಳಲ್ಲಿ ಸಂಚಾರ ಮಾಡುತ್ತಿರುವ ಪೊಲೀಸರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊವಿಡ್ ಹಾಗೂ ಸಂಚಾರಿ ನಿಯಮಗಳಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಳಗಾವಿಯ ಚೆನ್ನಮ್ಮ ಸರ್ಕಲ್, ಆರ್‍ಟಿಓ ಸರ್ಕಲ್, ಧರ್ಮವೀರ ಸಂಭಾಜಿ ಸರ್ಕಲ್, ಹಾಗೂ ಬಸವೇಶ್ವರ ಸರ್ಕಲ್‍ಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ, ಮಾಸ್ಕ್ ಧರಿಸುವಂತೆ, ಹಾಗೂ ಸಂಚಾರಿ ನಿಯಮಗಳನ್ನು ಕಾಪಾಡುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದಾರೆ.

Tags:

error: Content is protected !!