Kalaburgi

ಲಾಕ್‍ಡೌನ್, ಸೆಮಿಲಾಕ್‍ಡೌನ್, ವೀಕೆಂಡ್ ಲಾಕ್‍ಡೌನ್ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು..?

Share

ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಜನರು ಸಹಕಾರ ಅಗತ್ಯವಿದೆ. ಜನರು ಸಹಕಾರ ಕೊಟ್ಟರೆ ಬಹಳಷ್ಟು ನಿಯಂತ್ರಣ ಮಾಡಲು ಸಾಧ್ಯವಿದೆ. ಹೀಗಾಗಿ ಎಲ್ಲರೂ ಕೋವಿಡ್ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡರು.

ಕಲಬುರ್ಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಹೆಚ್ಚಾಗುತ್ತಿದೆ. ಅದೇ ರೀತಿ ಒಮಿಕ್ರಾನ್ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಮಾರ್ಗದರ್ಶನ ಪಡೆದುಕೊಂಡು ಬರುವ ದಿನಗಳಲ್ಲಿ ಒಂದು ಸುದೀರ್ಘವಾದ ಯೋಜನೆ ಮಾಡಬೇಕಿದೆ. ಅಲ್ಲದೇ ಹಿಂದಿನ ಎರಡು ಅಲೆಗಳ ಅನುಭವದ ಆಧಾರದ ಮೇಲೆ ನಮ್ಮ ಮೂಲಸೌಕರ್ಯಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳುವ ನಿಟ್ಟಿನಲ್ಲಿ ಬೆಡ್, ಐಸಿಯು, ಆಕ್ಸಿಜನ್ ಬೆಡ್, ಆಕ್ಸಿಜನ್ ಲಾಜಿಸ್ಟಿಕ್ಸ, ಔಷದೋಪಚಾರ ಸೇರಿದಂತೆ ಯಾವುದೇ ರೀತಿ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಇನ್ನು ರಾಜ್ಯದಲ್ಲಿ ಶಾಲೆಗಳ ಬಂದ್ ವಿಚಾರಕ್ಕೆ ನೋಡೋಣ ತಜ್ಞರು ಏನು ಹೇಳುತ್ತಾರೆ ಎಂದು ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಎಂದರು.
ಚೆಕ್‍ಪೋಸ್ಟಗಳಲ್ಲಿ ಸರಿಯಾಗಿ ತಪಾಸಣೆ ಆಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಸಿದ ಸಿಎಂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳೊಂದಿಗೆ ವ್ಯಾಪಕ ಗಡಿ ಸಂಪರ್ಕವಿದೆ. ಕೆಲವು ಮುಖ್ಯ ಚೆಕ್‍ಪೋಸ್ಟಗಳಲ್ಲಿ ತಪಾಸಣೆ ಆಗುತ್ತಿದೆ. ಇನ್ನು ಕೆಲವು ಹಳ್ಳಿಗಳ ಮಟ್ಟದಲ್ಲಿ ಕೆಲ ಸಂಪರ್ಕವಿದೆ. ಹೀಗಾಗಿ ಇಂದು ಸೂಚನೆ ಕೊಡುತ್ತಿದ್ದೇನೆ. ಆಯಾ ಪೊಲೀಸ್ ಠಾಣೆಗಳಿಗೆ ಜವಾಬ್ದಾರಿ ವಹಿಸಿ, ಹೆಚ್ಚಿನ ಚೆಕ್‍ಪೋಸ್ಟಗಳನ್ನು ತೆಗೆಯಲಾಗುವುದು ಎಂದರು.

ಲಾಕ್‍ಡೌನ್, ಸೆಮಿಲಾಕ್‍ಡೌನ್, ವೀಕೆಂಡ್ ಲಾಕ್‍ಡೌನ್ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತಜ್ಞರು ಈಗಿರುವಂತಹದು ಹಾಗೂ ಮುಂದೆ ಈ ಟ್ರೆಂಡ್ ಹೇಗಿರುತ್ತೆ ಎಂಬ ಬಗ್ಗೆ ಅವರದ್ದು ಒಂದು ಲೆಕ್ಕಾಚಾರ ಇರುತ್ತದೆ. ಅದಕ್ಕೆ ಅನುಗುಣವಾಗಿ ನಾವು ಮಾಡಬೇಕಾಗುತ್ತದೆ. ಎರಡೂ ಅಲೆಗಳ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಾಕಷ್ಟು ಹಿಂಜರಿತವಾಗಿತ್ತು. ಈಗ ಆರ್ಥಿಕ ಸುಧಾರಣೆ ಆಗುತ್ತಿದೆ. ಇಂದು ಆರ್ಥಿಕತೆ ಚಟುವಟಿಕೆಗಳು ಕೂಡ ನಡೆಯಬೇಕು. ಅದೇ ರೀತಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

Tags:

error: Content is protected !!