Gokak

ಲಕ್ಷ್ಮೀದೇವಿ ಜೊತೆಗೆ ಅಪ್ಪುಗೂ ಪೂಜೆ: ಗೋಕಾಕ್‍ನಲ್ಲಿ ಓರ್ವ ಅಪರೂಪದ ಅಭಿಮಾನಿ

Share

ಕರುನಾಡಿನ ರಾಜರತ್ನ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ಎರಡು ತಿಂಗಳು ಆಗುತ್ತಾ ಬಂದಿದೆ. ಆದರೂ ಅವರ ಮೇಲಿನ ಅಭಿಮಾನ ಮಾತ್ರ ಇನ್ನು ಕೂಡ ಕಡಿಮೆ ಆಗಿಲ್ಲ. ಪ್ರತಿನಿತ್ಯ ಅವರನ್ನು ನೆನೆಯುವ ಒಂದಿಲ್ಲೊಂದು ಅಪರೂಪದ ಘಟನೆಗಳು ನಡೆಯುತ್ತಿವೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಗೋಕಾಕ್ ಅಭಿಮಾನಿ ಅಪ್ಪು ಅವರನ್ನು ದೈವತ್ವಕ್ಕೆ ಏರಿಸಿದ್ದಾನೆ.

ಹೌದು ಗೋಕಾಕ್ ನಗರದ ಕಲ್ಯಾಣಿ ಸ್ವೀಟ್ಸ್ ಅಂಗಡಿಯಲ್ಲಿ ಅಪ್ಪು ಅಭಿಮಾನಿಯೋರ್ವರು ಲಕ್ಷ್ಮೀದೇವಿ ಫೋಟೋ ಜೊತೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಇಟ್ಟು ಪೂಜಿಸುತ್ತಿದ್ದಾರೆ. ಈ ಮೂಲಕ ನೆಚ್ಚಿನ ನಟನಿಗೆ ದೇವರ ಸ್ಥಾನವನ್ನು ಕೊಟ್ಟಿದ್ದಾನೆ. ಅಂಗಡಿ ಉದ್ಘಾಟನೆ ಸಮಾರಂಭದಲ್ಲಿ ಉದ್ಯಮಿ ಕಲ್ಯಾಣಿ ಸ್ವೀಟ್ಸ್ ಮಾಲೀಕ ಆನಂದ ಗೋಟಡಕಿಯವರಿಗೆ ಅಪ್ಪು ಅವರ ಫೋಟೋವೊಂದು ಉಡುಗೊರೆಯಾಗಿ ಬಂದಿತ್ತು. ಇದೀಗ ಫೋಟೋವನ್ನು ದೇವರ ಪಕ್ಕದಲ್ಲಿಯೇ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಪರೋಪಕಾರಿ ಕೆಲಸ ಮಾಡಿದ್ರೆ ಅಭಿಮಾನಿಗಳು, ಜನರು ದೈವತ್ವಕ್ಕೆ ಏರಿಸುತ್ತಾರೆ ಎಂಬುದಕ್ಕೆ ಅಪ್ಪು ಜೀವನವೇ ಸಾಕ್ಷಿಯಾಗಿದೆ. ನಿಜವಾಗಲೂ ಅಪ್ಪು ಮರೆಯದ ಮಾಣಿಕ್ಯ.

Tags:

error: Content is protected !!