Banglore

ರಾಮದುರ್ಗ ಮಕ್ಕಳ ಸಾವು ಕೇಸ್: ನರ್ಸ-ಫಾರ್ಮಾಸಿಸ್ಟ್ ಸಸ್ಪೆಂಡ್: ಸಚಿವ ಸುಧಾಕರ್ ಆದೇಶ

Share

ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಇಬ್ಬರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಹಳ್ಳಿ ಆರೋಗ್ಯ ಕೇಂದ್ರ ಎಎನ್‍ಎಮ್ ಮತ್ತು ಫಾರ್ಮಾಸಿಸ್ಟ್ ಈ ಇಬ್ಬರನ್ನೂ ಸಸ್ಪೆಂಡ್ ಮಾಡಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಮಕ್ಕಳ ನಿಗೂಢ ಸಾವು ಕೇಸ್‍ಗೆ ಸಂಬಂಧಪಟ್ಟಂತೆ ವರದಿ ತರಿಸಿಕೊಂಡಿದ್ದೇನೆ. ಜನವರಿ 10ರಂದು 4 ಮಕ್ಕಳಿಗೆ ಎಂಆರ್ ವ್ಯಾಕ್ಸಿನ್ ಕೊಡಲಾಗಿತ್ತು. ಈ ವೇಳೆ ನಾಲ್ವರು ಮಕ್ಕಳಲ್ಲಿ ರಾತ್ರಿ ವಾಂತಿಭೇದಿ ಶುರುವಾಗಿ, ಓರ್ವ ಮಗು ಅಂದು ರಾತ್ರಿ 10.30ರ ಸುಮಾರಿಗೆ ಅಲ್ಲಿಯೇ ಸಾವನ್ನಪ್ಪಿದೆ. ಒಂದು ಮಗುವನ್ನು ಮಕ್ಕಳು ರಾಮದುರ್ಗ ತಾಲೂಕಾಸ್ಪತ್ರೆಗೆ ಸೇರಿಸಿದ್ದರು. ಅದೇ ರೀತಿ ಇಬ್ಬರು ಮಕ್ಕಳನ್ನು ಬಿಮ್ಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 12ನೇ ತಾರೀಖಿನವರೆಗೂ ಮಗು ಆರಾಮ ಇತ್ತು. ಸೆಫ್ಟಿಕ್ ಶಾಕ್ ಸಿಂಡ್ರೋಮ್‍ನಿಂದ ಸಾವಾಗಿದೆ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ಹೇಳಿದ್ದಾರೆ. ಆದರೂ ಕೂಡ ಬಾಕಿ ತನಿಖೆ ಮಾಡಲಾಗುವುದು. ಈಗ ಎಎನ್‍ಎಮ್ ಮತ್ತು ಅಲ್ಲಿನ ಫಾರ್ಮಾಸಿಸ್ಟನ್ನು ತಕ್ಷಣವೇ ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದ್ದೇನೆ. ರಾಜ್ಯದ ನೋಡಲ್ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ ವಿಚಾರಣೆ ಮಾಡಿ ಕೋಲ್ಡ್ ಚೈನ್, ನಮ್ಮ ಶಿಷ್ಟಾಚಾರವನ್ನು ಸರಿಯಾಗಿ ಅನುಸರಿಸಿದ್ದಾರಾ..? ಇಲ್ಲವಾ ಎಂಬ ಬಗ್ಗೆ ಎರಡು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

Tags:

error: Content is protected !!