Hukkeri

ರಾಜ್ಯ ಸರ್ಕಾರಿ ನೌಕರರ ಕ್ಯಾಲೆಂಡರ್ ಬಿಡುಗಡೆಗೋಳಿಸಿದ ಜಿಲ್ಲಾದ್ಯಕ್ಷ ಜಗದೀಶ ಪಾಟೀಲ

Share

ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಸರಕಾರಿ ನೌಕರರ ಕ್ಯಾಲೇಂಡರ್ ಬಿಡುಗಡೆ ಸಮಾರಂಭದಲ್ಲಿ‌ ಜಿಲ್ಲಾ ಅದ್ಯಕ್ಷ ಜಗದೀಶ ಪಾಟೀಲ ಬಿಡಗಡೆಗೋಳಿಸಿದರು. ನಂತರ ನೌಕರರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರಿ ನೌಕರರ ಸಮಸ್ಯಗೆ ಮತ್ತು ಹಲವಾರು ಬೇಡಿಕೆಗೆ ರಾಜ್ಯಾದ್ಯಕ್ಷ ಷಡಕ್ಷರಿ ಯವರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ ಅವರ ಕೈ ಬಲಪಡುಸಲು ನಾವು ಒಗ್ಗಟ್ಟಾಗಿ ಕೇಲಸ ಮಾಡಬೇಕಾಗಿದೆ, ಅದರಂತೆ ಹುಕ್ಕೇರಿ ತಾಲೂಕಿನ ನೌಕರರ ಮಾಜಿ ಅಧ್ಯಕ್ಷ ಮಹಾಂತೇಶ ನಾಯಿಕ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

ತಾಲೂಕಾ ಘಟಕದ ಯಾವುದೇ ಸದಸ್ಯರು ಅವರಿಗೆ ಬೆಂಬಲವಿಲ್ಲ. ಅವರು ನಾನೇ ಅಧ್ಯಕ್ಷ ಅಂತಾ ಹೇಳುತ್ತಿರುವದು ಸರಿಯಲ್ಲ. ಸಂಘದ ಯಾವುದೇ ಸದಸ್ಯರು ಮಹಾಂತೇಶ ನಾಯಕ ಅವರನ್ನ ಅಧ್ಯಕ್ಷರಾಗಿ ಮುಂದುವರೆಸಿ ಎಂದು ಹೇಳುತ್ತಿಲ್ಲ. ಮಾಜಿ ಅಧ್ಯಕ್ಷ ಮಹಾಂತೇಶ ನಾಯಿಕ‌ ಕಳೆದ ತನ್ನ ಎರಡು ವರೆ ವರ್ಷದ ಅವಧಿಯಲ್ಲಿ ನೌಕರರ ಪರವಾಗಿ ಸಂಘದ ಪರವಾಗಿ ಯಾವುದೇ ಕಾರ್ಯ ಮಾಡಿಲ್ಲ. ಕೇವಲ ಒಂದೆ ಒಂದು ಸಭೆ ನಡೆಸಿರುವ ಅವರ ಕಾರ್ಯವನ್ನ ತೋರಿಸುತ್ತದೆ.‌ ಅವರಿಂದ ದಬ್ಬಾಳಿಕೆಯಿಂದ ಯಾರು ರಾಜೀನಾಮೆ ಪಡೆದಿಲ್ಲ‌. ಅವರ ಸ್ಥಾ‌ನಕ್ಕೆ ಅವರು ಸಂಘದ ಸದಸ್ಯರ ಎದುರೇ ತನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿ ಠರಾವ್ ಪುಸ್ತಕದಲ್ಲಿ ಸಹಿ‌ ಮಾಡಿದ್ದಾರೆ.

ಹೀಗಾಗಿ ಪ್ರಭಾರಿ ಅಧ್ಯಕ್ಷರಾಗಿ ಅವಿನಾಶ ಹೊಳೆಪ್ಪಗೋಳ ಮುಂದುವರೆಯುತ್ತಾರೆ ಶೀಘ್ರದಲ್ಲೆ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ನಡೆಸಲಾಗುವದು ಎಂದರು.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಪ್ರಭಾರಿ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಗೌರವ ಅಧ್ಯಕ್ಷ ಎಸ್ ಎಸ್ ಕರಿಗಾರ, ಎನ್ ಬಿ ಗುಡಸಿ, ಎಸ್ ಎಲ್‌ ನಾಯೀಕ, ಎ ಎಸ್ ಹಿರೇಮಠ, ಗೌತಮ‌ ಚಲುವಾದಿ, ನವೀನ ಬಾಯಿನಾಯುಕ, ಮೋಹನ ಹೆಳಗೇರಿ, ಬಿಕೆ ಚೌಗಲಾ, ಜಿಲ್ಲಾ ಘಟಕದ ಚಂದ್ರು ಕೋಲಕಾರ, ಶ್ರವಣ ರಾಣವಗೋಳ ಸೇರಿದಂತೆ ಮುಂತಾದವರಿದ್ದರು ಉಪಸ್ಥಿತರಿದ್ದರು.

Tags:

error: Content is protected !!