ರಾಜ್ಯದಲ್ಲಿ ವಿಕೇಂಡ್ ಕಫ್ರ್ಯೂ ಅಗತ್ಯವಿಲ್ಲ. ಈ ಕುರಿತಂತೆ ಸಿ.ಎಂ ಬೊಮ್ಮಾಯಿಯವರು ಸೂಕ್ತ ನಿರ್ಧಾರವನ್ನು ಕೈಗೊಂಡು ವಿಕೇಂಡ್ ಕಫ್ರ್ಯೂವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ದುರ್ಯೋಧನ ಐಹೊಳೆಯವರು ಹೇಳಿದ್ದಾರೆ.

ರಾಯಬಾಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರೋಶಿ ಗ್ರಾಮದಲ್ಲಿ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿ ಶಾಸಕ ದುರ್ಯೋಧನ ಐಹೊಳೆ ವಿಕೇಂಡ್ ಕಫ್ರ್ಯೂ ಸಡಿಲಿಕೆ ಮಾಡಬೇಕು. ನನ್ನ ಪ್ರಕಾರ ವಿಕೇಂಡ್ ಕಫ್ರ್ಯೂ ಹಿಂದಕ್ಕೆ ತೆಗೆದುಕೊಂಡರೆ ಒಳಿತು. ಈ ಬಗ್ಗೆ ಸಿ. ಎಂ.ಬಸವರಾಜ ಬೊಮ್ಮಾಯಿಯವರು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡು ವಿಕೇಂಡ್ ಕರ್ಫೂ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಇದೇ ಜನೇವರಿ 22 ರಂದು ನನ್ನ ಹುಟ್ಟು ಹಬ್ಬ ಕಾರ್ಯಕ್ರಮವನ್ನು ರದ್ದು ಮಾಡಿದ್ದೇನೆ ಎಂದು ಶಾಸಕ ದುರ್ಯೋಧನ ಐಹೊಳೆ ತಿಳಿಸಿದರು.
ಈ ಸಂಧರ್ಭದಲ್ಲಿ ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಜೆಧೆ, ಉಪಾಧ್ಯಕ್ಷ ಮಹೇಶ ಚೌಡನ್ನವರ, ವಿಜಯ ಕೋಟಿವಾಲೆ, ರಾಜು ಯಲಾಯಿಗೋಳ, ಸಂಜಯ ಕಾಂಬಳೆ, ಜಗದೀಶ ಭಾತೆ, ಸುಜಾತಾ ಜ್ಞಾನೇಶ್ವರ ಖಾಡೆ,ಖುತಿಜಾ ಮುಲ್ಲಾ,ಸಂತೋಷ ಅಂಬಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.