ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸ್‍ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಅಶ್ವತ್ ನಾರಾಯಣ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಖಂಡಿತ ಈ ದಿಕ್ಕಿನಲ್ಲಿ ಸರ್ಕಾರ ಏನೆಲ್ಲಾ ಕ್ರಮ ವಹಿಸಬೇಕೋ, ಖಂಡಿತವಾಗಿ ಕ್ರಮ ವಹಿಸುವುದನ್ನು ಮಾಡುತ್ತೇವೆ. ಎಲ್ಲರ ರಕ್ಷಣೆಗೆ ಬರಬೇಕು, ಜೀವನಾಂಶವು ನಡೆಯಬೇಕು. ಬಹಳ ಕಷ್ಟದ, ಸವಾಲಿನ ಮಧ್ಯದಲ್ಲಿ ಇರಬೇಕಾದರೆ ಇಂತಹ ಪ್ರತಿಷ್ಠಿತ ಕಾರ್ಯಕ್ರಮ ಮಾಡುತ್ತಿರುವುದು ಸೂಕ್ತವಲ್ಲ. ಹೀಗಾಗಿ ಬೆಂಗಳೂರು, ರಾಜ್ಯದ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.