ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಿಂದ ಮಜಲಟ್ಟಿ ಹಾಗೂ ಖಜಗುನಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆಯವರು ಚಾಲನೆಯನ್ನು ನೀಡಿದರು..

ನೆರೆಹಾವಳಿಯ ವಿಶೇಷ ಅನುದಾನದಡಿಯಲ್ಲಿ ಸುಮಾರು ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ಮಜಲಟ್ಟಿ ಹಾಗೂ ಖಜಗುನಟ್ಟಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆಯವರು ಚಾಲನೆಯನ್ನು ನೀಡಿದರು..ನಂತರ ಮಾಧ್ಯಮಗಳ ಜೊತೆ ಮಾತನಾಡಿ ಶಾಸಕ ದುರ್ಯೋಧನ ಐಹೊಳೆಯವರು ನೆರೆಹಾವಳಿಯ ವಿಶೇಷ ಯೋಜನೆಯಲ್ಲಿ ೧ ಕೋಟಿ ರೂಪಾಯಿ ಅನುದಾನದ ಮಂಜೂರು ಆಗಿದ್ದು,ಇವತ್ತು ಬೆಳಕೂಡ ಗ್ರಾಮದಲ್ಲಿ ೨೦ ಲಕ್ಷರೂಪಾಯಿ ವೆಚ್ಚದಲ್ಲಿ ಹಳ್ಳಕ್ಕೆ ನಿರ್ಮಿಸಿರುವ ಸೇತುವೆಯ ಅಪ್ರೋಚ್ ರಸ್ತೆ ಹಾಗೂ ಪಿಚಿಂಗ್ ನಿರ್ಮಾಣ ಕಾಮಗಾರಿಗೆ ಹಾಗೂ ೨೦ ಲಕ್ಷರೂಪಾಯಿ ವೆಚ್ಚದಲ್ಲಿ ಬಂಬಲವಾಡ-ಯಾದಗೂಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿದ್ದೇವೆ ಎಂದರು..
ನಂತರ ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಮಾತನಾಡಿ ಇವತ್ತು ಕರೋಶಿ ಗ್ರಾಮದ ಮಜಲಟ್ಟಿ,ಖಜಗುನಟ್ಟಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು,ಈ ರಸ್ತೆಯು ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.ಹಾಗೂ ಈ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆಯನ್ನು ನೀಡಿದ ಶಾಸಕ ದುರ್ಯೋಧನ ಐಹೊಳೆಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಜೆಧೆ,ಉಪಾಧ್ಯಕ್ಷ ಮಹೇಶ ಚೌಡನ್ನವರ,ರಾಜು ಹರಗನ್ನವರ,ಫಾರುಖ ಪಟೇಲ್,ಅನ್ನಪ್ಪ ಶೆಂಡೂರೆ,ಜ್ಞಾನೇಶ್ವರ ಖಾಡೆ,ವಿಜಯ ಕೋಟಿವಾಲೆ,ಸಂಜಯ ಕಾಂಬಳೆ,ಸುರೇಶ ಕೇಸ್ತೆ,ಜಯವಂತ ಜಾಧವ,ಜ್ಞಾನೇಶ್ವರ ದೇವರುಷಿ,ರಾಜು ಯಲನಾಯಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು..