Belagavi

ರವಿವಾರ ಉದ್ಯಮಭಾಗದಲ್ಲಿ ಬ್ಲ್ಯಾಕ್ ಸಂಡೇ..!

Share

ಬೆಳಗಾವಿಯ ಉದ್ಯಮಭಾಗದ ವಿದ್ಯುತ್ ಉಪಕೇಂದ್ರದಲ್ಲಿ ಹೊಸದಾಗಿ ಪರಿವರ್ತಕ ಅಳವಡಿಸುವ ಬೃಹತ್ ಕಾಮಗಾರಿಯನ್ನು ರವಿವಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ರವಿವಾರ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಹೌದು ಉದ್ಯಮಭಾಗ ಉಪಕೇಂದ್ರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಚೆಂಬರ್ ಫಾ ಕಾಮರ್ಸ, ಖಾನಾಪುರ ರಸ್ತೆ, ಉದ್ಯಮಭಾಗ್, ಇಂಡಸ್ಟ್ರೀಯಲ್ ಏರಿಯಾ, ಗುರುಪ್ರಸಾದ್ ಕಾಲೋನಿ, ರಾಣಿ ಚನ್ನಮ್ಮ ನಗರ, 3ನೇ ಗೇಟ್, ವಸಂತ ವಿಹಾರ ನಗರ, ಸುಭಾಷಚಂದ್ರ ಕಾಲೋನಿ, ಉತ್ಸವ ಹೋಟೆಲ್, ಡಚ್ ಇಂಡಸ್ಟ್ರೀಯಲ್, ಬೇಮಕೊ ಇಂಡಸ್ಟ್ರೀಯಲ್, ಅಶೋಕ್ ಐರನ್ ಇಂಡಸ್ಟ್ರೀಯಲ್, ಅರುಣ ಇಂಜಿನಿಯರಿಂಗ್, ಎಕೆಪಿ ಇಂಡಸ್ಟ್ರೀಯಲ್ ಏರಿಯಾ, ಗೆಲೆಕ್ಸಿ ಇಂಡಸ್ಟ್ರೀಯಲ್ ಏರಿಯಾ, ಜಿಐಟಿ ದೇವೇಂದ್ರ ನಗರ, ಮಹಾವೀರ ನಗರ, ಶಾಂತಿ ಐರನ್ ಇಂಡಸ್ಟ್ರೀಯಲ್ ಏರಿಯಾ, ಜೈತನ ಮಾಳ, ಸಮೇದ ನಗರ ಜ್ಞಾನಪ್ರಮೋದ ಶಾಲೆ ಹತ್ತಿರ, ಭವಾನಿ ನಗರ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯಾನಂದ ಕಾಲೋನಿ, ಡಿಪ್ಹೇನ್ಸ ಕಾಲೋನಿ, ವಾಟವೆ ಕಾಲೋನಿ ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

Tags:

error: Content is protected !!