ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟು ಬೆಳೆದಿದೆ, ಅಭಿವೃದ್ಧಿ ಹೊಂದಿದೆಯೋ ಅಷ್ಟೇ ನಮ್ಮ ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸಾಲಿಮಠ ಕಳವಳ ವ್ಯಕ್ತಪಡಿಸಿದರು.

ಶುಕ್ರವಾರ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಭಾವುರಾವ್ ಕಾಕತಕರ್ ಕಾಲೇಜಿನಲ್ಲಿ ಸೈನ್ಸ ಅಸೊಸಿಯೇಷನ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಐಎಫ್‍ಎಸ್ ವಿಜಯಕುಮಾರ್ ಸಾಲಿಮಠ ಅವರು ಯಾವುದೇ ವಿಜ್ಞಾನ ಮತ್ತು ತಂತ್ರಜ್ಞಾನ ಜನರಿಗೆ ಹಾಗೂ ನಮ್ಮ ಪರಿಸರಕ್ಕೆ ಉಪಯೋಗ ಆಗುವಂತಿರಬೇಕು. ಈಗ ಸಾಕಷ್ಟು ಕಡೆ ಕೊರೊನಾದಂತಹ ರೋಗಗಳು ಬರುತ್ತಿವೆ. ಇದಕ್ಕೆಲ್ಲಾ ಕಾರಣ ಪರಿಸರ ಮಾಲಿನ್ಯ, ಅರಣ್ಯ ನಾಶ ಮಾಡುತ್ತಿರುವುದು. ಇದನ್ನೆಲ್ಲಾ ನಿಲ್ಲಿಸಿ ಪರಿಸರವನ್ನು ನಾವು ಕಾಪಾಡಬೇಕಿದೆ. ಇಂದಿನ ಯುವ ಜನಾಂಗ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಕಷ್ಟು ಹುಡುಗರು ಮೊಬೈಲ್, ಗ್ಯಾಜೆಟ್‍ನಲ್ಲಿ ಬ್ಯುಜಿ ಆಗಿಬಿಟ್ಟಿದ್ದಾರೆ. ಇದನ್ನು ಬಿಟ್ಟು ಕಾಡಿನ ಕಡೆಗೆ ಬರಬೇಕು. ನಮ್ಮ ಅರಣ್ಯ ಇಲಾಖೆ ವತಿಯಿಂದ ಟ್ರೇಕ್ಕಿಂಗ್ ಸೇರಿದಂತೆ ಸಾಕಷ್ಟು ಒಳ್ಳೊಳ್ಳೆಯ ಕಾರ್ಯಕ್ರಮ, ಸೌಲಭ್ಯಗಳನ್ನು ಮಾಡಿದ್ದೇವೆ. ನಿಸರ್ಗದ ಸೌಂದರ್ಯವನ್ನು ಸವಿಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಿನ್ಸಿಪಾಲ್ ಡಾ.ಎಸ್.ಎನ್.ಪಾಟೀಲ್, ಸೈನ್ಸ ಅಸೊಸಿಯೇಷನ್ ಚೇರ್ಮನ್ ಡಾ.ಡಿ.ಎನ್.ಮಿಸಾಳೆ, ಕಾರ್ಯದರ್ಶಿ ಮನಿಶಾ ಶೇಖರ್ ಸುತಾರ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಎಸ್.ಕುಲಕರ್ಣಿ, ರಿಹಾನ್ ಮುಲ್ಲಾ, ಪ್ರೇರಣಾ ಕಳಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.