ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಇಟಗಿ ಶಾಲೆಯಲ್ಲಿ 15 ವರ್ಷದಿಂದ 18 ವರ್ಷದೊಳಗಿನವರೆಗೆ ಕೊವಿಡ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಇಟಗಿ ಶಾಲೆಯಲ್ಲಿ 15 ವರ್ಷದಿಂದ 18 ವರ್ಷದೊಳಗಿನವರೆಗೆ ಕೊವಿಡ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಲಸಿಕಾ ಕಾರ್ಯಕ್ರಮವನ್ನು ಇಟಗಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಇಟಗಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಲೀಮಾ ನದಾಫ್ ಹಾಗೂ ಪೂಜಾ ಸೇರಿದಂತೆ ಇನ್ನಿತರರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಡಾಕ್ಟರ್ ಸಲೀಮಾ ನದಾಫ್ ಅವರು ಹಂತ ಹಂತವಾಗಿ ಈ ಕೊರೋನಾ ವ್ಯಾಕ್ಸಿನ್ ಅನ್ನು ಎಲ್ಲರಿಗೂ ನೀಡಲಾಗಿದೆ ಈಗ 15 ವರ್ಷದಿಂದ 18 ವರ್ಷದೊಳಗಿನವರೆಗೆ ಮಕ್ಕಳಿಗೆ ನೀಡಲಾಗುತ್ತಿದ್ದು ಇದರ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ, ವ್ಯಾಕ್ಸಿನ್ ನಿಂದ ಯಾವುದೇ ತೊಂದರೆಯಿಲ್ಲ, ಎಲ್ಲ ವಿದ್ಯಾರ್ಥಿಗಳು ಈ ಲಸಿಕೆಯನ್ನು ಪಡೆಯಬೇಕು,ಶಾಲೆಬಿಟ್ಟು ಹೊರಗಡೆ ಇರುವ ಮಕ್ಕಳು ಕೂಡಾ ಪಡೆಯಬೇಕು,
ಏನಾದ್ರೂ ಸಮಸ್ಯೆಯಾದಲ್ಲಿ ಯಾವಾಗಲೂ ನಿಮ್ಮ ಸೇವೆಯಲ್ಲಿ ಇರುತ್ತೆವೆ ಹೀಗಾಗಿ ಎಲ್ಲರೂ ಈ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿ ವಿದ್ಯಾರ್ಥಿಗಳಲ್ಲಿ ಆತ್ಮಧೈರ್ಯವನ್ನು ಡಾಕ್ಟರ್ ಸಲೀಮಾ ನದಾಫ್ ಅವರು ತುಂಬಿದರು.

ತದನಂತರದಲ್ಲಿ ವೈದ್ಯಾಧಿಕಾರಿ ಡಾಕ್ಟರ್ ಪೂಜಾ ಬೊಮ್ಮನ್ನವರ ಅವರು ಮಾತನಾಡಿ 15 ವರ್ಷದಿಂದ 18 ವರ್ಷದೊಳಗಿನವರೆಗೆ ವ್ಯಾಕ್ಸಿನ್ ಕೊಡ್ತಾ ಇದಿವಿ ಇದರಿಂದ ಯಾವುದೇ ತೊಂದರೆ ಇಲ್ಲ, ಟೈಷನ್ ಫ್ರೀಯಾಗಿ ತೆಗೆದುಕೊಳ್ಳಬಹುದು, ಒಬ್ಬರಿಗೆ ಮಾತ್ರ ಸ್ವಲ್ಪ ಜ್ವರ ಬರಬಹುದು, ಹೆದರುವ ಅಗತ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸೇರಿದಂತೆ ಇಟಗಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು