Belagavi

ಯಳ್ಳೂರಲ್ಲಿ ಧರ್ಮಸ್ಥಳದಿಂದ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿ ಸಮಾರೋಪ

Share

ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.

ಯಳ್ಳೂರು ಗ್ರಾಮದಲ್ಲಿ  ಮಂಗಳವಾರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಧಾರವಾಡದ ಜ್ಞಾನ ವಿಕಾಸ ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ಸಂಘದ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ 30 ದಿನಗಳ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಮಂಜುನಾಥ ಸ್ವಾಮಿಯ ಪೂಜೆ ನೆರವೇರಿತು. ಇದೇ ವೇಳೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಗಣ್ಯರು ವಿತರಿಸಿದರು.

ಸಂಘದ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿಯವರು ಸ್ವಾವಲಂಬಿ ಜೀವನಕ್ಕೆ ಸ್ವಉದ್ಯೋಗ ಬಹಳ ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ಸ್ವ ಉದ್ಯೋಗದ ಬಗ್ಗೆ ಉತ್ತಮ ತರಬೇತಿ ಪಡೆದುಕೊಂಡು  ಸ್ವಂತ ಉದ್ಯೋಗವನ್ನು ಮುಂದುವರಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಕರೆ ನೀಡಿದರು.

ನಂತರ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ ರಾವ್ ಮಾತನಾಡಿ ಮಹಿಳೆಯರು ಸಬಲೀಕರಣಗೊಳ್ಳಬೇಕಾದರೆ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಬಲರಾದರೆ ಸಾಲದು. ಜೊತೆಗೆ ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕ ಕ್ಷೇತ್ರದಲ್ಲಿ ಸಬಲ ಗೊಂಡು ತನ್ನ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಕ್ಕೆ ಮಹಿಳೆಯರು ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದೂದಪ್ಪಾ ಬಾಗೇವಾಡಿ , ರೈತ ಸಂಘದ ಅಧ್ಯಕ್ಷ ಪ್ರಕಾಶ್ ತೋಪಿನಕಟ್ಟಿ, ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ, ಉಜ್ವಲ ಕೇಂದ್ರದ ಅಧ್ಯಕ್ಷೆ ಸುರೇಖಾ ಪಾಟೀಲ್, ಮಹಾದೇವ್ ಮಂಗನಾಯಿಕ್, ಟೈಲರಿಂಗ್ ಶಿಕ್ಷಕಿ ಶೋಬಾ ಪಾಟೀಲ್, ಒಕ್ಕೂಟ ಅಧ್ಯಕ್ಷೆ ಸುನಿತಾ ಮುಚ್ಚಂಡಿ, ಸಮನ್ವಯಾಧಿಕಾರಿ ಸುರೇಖಾ, ಮೇಲ್ವಿಚಾರಕಿ ಗಂಗಾ ಪಾಟೀಲ್   ಸೇರಿದಂತೆ ಟೈಲರಿಂಗ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ಶಿಬಿರಾರ್ಥಿಗಳು ಮತ್ತು ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

Tags:

error: Content is protected !!