ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಗ್ರಾಮದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಹಾಗೂ ಸಾವಿತ್ರಿಭಾಯಿ ಪುಲೆ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವದು ಎಂದು ದಲಿತ ಮುಖಂಡ ಉಮೇಶ ಭೀಮಗೋಳ ಹೇಳಿದರು.

ಸಂಕೇಶ್ವರ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಉಮೇಶ ಭೀಮಗೋಳ ಭೀಮಾ ಕೋರೆಗಾಂವದಲ್ಲಿ 500 ಜನ ಮಹಾರ ಸೈನಿಕರು 20 ಸಾವಿರ ಪೇಶ್ವೆಗಳ ವಿರುದ್ಧ ಹೋರಾಡಿ ಜಯಗಳಿಸಿದ ಹಿನ್ನಲೆಯಲ್ಲಿ ಜನೆವರಿ 3ರಂದು ಯಮಕನಮರ್ಡಿ ನಗರದಲ್ಲಿ ವಿಜಯೋತ್ಸವ ಹಾಗೂ ಸಾವಿತ್ರಿಭಾಯಿ ಪುಲೆಯವರ ಜನ್ಮ ದಿನವನ್ನು ಆಚರಿಸಲಾಗುವದು ಕಾರಣ ಹುಕ್ಕೇರಿ ತಾಲೂಕಿನ ಸಮಸ್ತ ದಲಿತ ಬಾಂಧವರು ಈ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿ ಗೋಳಿಸಬೆಕೆಂದು ವಿನಂತಿಸಿದರು.
ನಂತರ ತಾಲೂಕಿನ ವಿವಿಧ ದಲಿತ ಮುಖಂಡರೊಂದಿಗೆ ಕಾರ್ಯಕ್ರಮದ ರೂಪ ರೇμÉಗಳನ್ನು ಸಿದ್ಧಪಡಿಸಿದರು. ದಲಿತ ಮುಖಂಡ ಮಹೇಶ ಹಟ್ಟಿಹೊಳಿ ಮಾತನಾಡಿ ಭೀಮಾ ಕೋರೆಗಾಂವ ಯುದ್ಧಕ್ಕೆ ಕಾರಣ ಮತ್ತು ಉದ್ದೇಶಗಳನ್ನು ನಮ್ಮ ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಹಾಗೂ ಸಾವಿತ್ರಿಭಾಯಿ ಪುಲೆಯವರ ಆದರ್ಶಗಳು, ಅವರು ಅನುಭವಿಸಿದ ಕಹಿ ಅನುಭವಗಳನ್ನು ಮೆಲಕು ಹಾಕುವ ಉದ್ದೇಶದಿಂದ ಜನೆವರಿ 3ರಂದು ಸಾಯಂಕಾಲ 4 ಘಂಟೆಗೆ ಯಮಕನಮರ್ಡಿಯ ಹುಣಶಿಕೊಳ್ಳಮಠದ ಆವರಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ,
ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿಯವರು ಭಾಗವಹಿಸಲಿದ್ದಾರೆ ಕಾರಣ ತಾಲೂಕಿನ ಎಲ್ಲಾ ದಲಿತ ಬಾಂಧವರು ಭಾಗವಹಿಸಬೆಂಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರಾದ ಅಕ್ಷಯ ವೀರಮುಖ, ಪ್ರಕಾಶ ಕೋಳಿ, ಪ್ರಮೋದ ಹೊಸಮನಿ, ಅಶೋಕ ತಳವಾರ, ಗಣಪತಿ ಕಾಂಬಳೆ, ಪ್ರಶಾಂತ ತಳವಾರ, ಸದಾ ಬಿಕೆ, ಬಾಳಾಸಾಹೇಬ ಕೋಳಿ, ಚಂದ್ರು ಚಲವಾದಿ, ಗುರುನಾಥ ಶಿಂಧೆ, ಪವನ ಸನದಿ ಸೇರಿದಂತೆ ನೂರಾರು ಜನ ದಲಿತ ಮುಖಂಡರು ಉಪಸ್ಥಿತರಿದ್ದರು.