ಮಕರ ಸಂಕ್ರಾಂತಿ ಹಿನ್ನಲೆಯಲ್ಲಿ ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಯಡೂರಿನ ಶ್ರೀ ವೀರಭದ್ರೇಶ್ವರ, ಭದ್ರಕಾಳೇಶ್ವರಿ ದೇವಿಯ ದರ್ಶನವನ್ನು ಪಡೆದುಕೊಂಡರು.

ಡಾ.ಪ್ರಭಾಕರ ಕೋರೆಯವರು ಮಕರ ಸಂಕ್ರಾಂತಿ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವಿಯ ದರ್ಶನವನ್ನು ಪಡೆದುಕೊಂಡರು. ಈ ವೇಳೆ ಕೋರೆ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ಸಾಥ್ ನೀಡಿದರು. ನಂತರ ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ತೆರಳಿ ಶ್ರೀಶೈಲ್ ಜದ್ಗುರುಗಳ ದರ್ಶನವನ್ನು ಪಡೆದುಕೊಂಡರು. ವೀರಭದ್ರೇಶ್ವರ ಹಾಗೂ ಕಾಡಸಿದ್ದೇಶ್ವರ ಮಠದ ಅಭಿವೃದ್ಧಿ ಕುರಿತು ಕೆಲಹೊತ್ತು ಚರ್ಚೆಯನ್ನು ನಡೆಸಿದರು.
ಈ ಸಂಧರ್ಭದಲ್ಲಿ ಚಿದಾನಂದ ಕೋರೆ ಸಕ್ಕರೆಯ ನಿರ್ದೇಶಕ ಅಜೀತರಾವ ದೇಸಾಯಿ, ಗ್ರಾ.ಪಂ ಉಪಾಧ್ಯಕ್ಷ ರಾಹುಲ್ ದೇಸಾಯಿ, ವಿನಾಯಕ ಚಿಕೋರ್ಡೆ, ನವನಾಥ ಚವಾನ, ಸಂಜಯ ಹೆದ್ದೂರೆ, ನಾಮದೇವ ಮಟಕೆ, ಸಚಿನ ಪಾಟೀಲ, ಸಂತೋಷ ಹಕಾರೆ, ಅಮೀತ ಪಾಟೀಲ, ನರಸಗೌಡ ಪಾಟೀಲ, ದಿಲೀಪ ಉಮರಾಣಿ, ಸಂತೋಷ ಜೋಷಿ, ಮನೋಹರ ಮೊಹಿತೆ, ಡಾ.ಸುಕುಮಾರ ಚೌಗಲೆ, ಯುವರಾಜ ಪಾಟೀಲ, ದಿನಕರ ಮಾಳಕರಿ, ಅಜೀತ ಭವಾನಿ, ಪ್ರಭಾಕರ ಪುಠಾಣೆ, ಅಶೋಕ ಗಾಯಕವಾಡ, ಚನ್ನಪ್ಪ ಹಕಾರೆ, ದಾದಾ ವಾಳಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.