hubbali

ಮೊಬೈಲ್ ರಿಚಾರ್ಜ್, ಡೇಟಾ ಪ್ಯಾಕ್ ದರ ಹೆಚ್ಚಳಕ್ಕೆ ಆಕ್ರೋಶ: ಬೀದಿಗಿಳಿದು ವಿದ್ಯಾರ್ಥಿಗಳ ಪ್ರತಿಭಟನೆ

Share

ಮೊಬೈಲ್ ರಿಚಾರ್ಜ್ ಹಾಗೂ ಡಾಟಾ ಪ್ಯಾಕ್ ದರ ಹೆಚ್ಚಳವನ್ನು ವಿರೋಧಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯುವಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ‌

ಆಲ್‌ ಇಂಡಿಯಾ ಡೆಮಾಕ್ರಟಿಕ್ ಯೂಥ ಆರ್ಗನೈಸೇಶನ್ ಸಂಘಟನೆ ನೇತೃತ್ವದಲ್ಲಿ, ಧಾರವಾಡ ತಾಲೂಕಿನ ಮುಮ್ಮಗಟ್ಟಿಯ ಎನ್ ಟಿ ಟಿ ಎಪ್ ತರಭೇತಿ ಕೇಂದ್ರ ಬಳಿಯಲ್ಲಿ, ವಿದ್ಯಾರ್ಥಿಗಳು ಸೇರಿ ಯುವಕರು ಪ್ರತಿಭಟನೆ ನಡೆಸಿ, ಖಾಸಗಿ ನೆಟವರ್ಕ್ ಕಂಪನಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರ.

ಈಗಾಗಲೇ ಕೋವಿಡ್ ಮಹಾಮಾರಿ ವೈರಸ್‌ನಿಂದಾಗಿ ಮಧ್ಯಮ ವರ್ಗದ ಜನರ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯು ಏರಿಕೆಯಾಗಿದೆ.‌ ಇಂತಹ ಸಮಯದಲ್ಲಿ ಟಿಲಿಕಾಂ ನೆಟವರ್ಕ್ ಕಂಪನಿಗಳು ತಮ್ಮ ಲಾಭಕ್ಕಾಗಿ, ಮೊಬೈಲ್ ರಿಚಾರ್ಜ್ ದರ ಹಾಗೂ ಡಾಟಾ ಪ್ಲಾನ್ ದರಗಳನ್ನು ಏಕಾಏಕಿ ಏರಿಕೆ ಮಾಡಿವೆ. ಇದರಿಂದ ವಿದ್ಯಾರ್ಥಿ ಸಮುದಾಯ ಸೇರಿದಂತೆ ಟೆಲಿಕಾಂ ನೆಟವರ್ಕ್ ಬಳಿಸಿ ಕೆಲಸ ಕಾರ್ಯ ಮಾಡುವ ಯುವಕರಿಗೆ ತುಂಬಾ ಕಷ್ಟವಾಗುತ್ತಿದೆ. ಈ ಕೂಡಲೇ ‌ಟೆಲಿಕಾಂ ಕಂಪನಿಗಳು ದರವನ್ನು ಇಳಿಸಿಬೇಕು‌ ಎಂದು ಅಗ್ರಹಿಸಿದರು.

Tags:

error: Content is protected !!