ಈಗಾಗಲೇ ಮೇಕೆದಾಟು ಜಾರಿ ಕುರಿತು ಎನ್ನೆಲ್ಲಾ ಮಾಡಬೇಕು ಅದನ್ನು ಮಾಡಲಾಗುತ್ತಿದೆ. ಮೇಕೆದಾಟು ಬಗ್ಗೆ ನಮ್ಮಗೆ ಬದ್ಧತೆ ಇದೆ. ಇದನ್ನು ತಿಳಿದುಕೊಂಡು ಕೂಡಾ ವಿಪಕ್ಷದವರು ಪಾದಯಾತ್ರೆ ಮಾಡಲು ಹೋಗುತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಜಕಾರಣವನ್ನು ಏಳೆದು ತರುತ್ತಿರುವುದು ಸ್ಪಷ್ಟವಾಗಿ ಗೋತ್ತಾಗುತ್ತಿದೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಟೀಕಿಸಿದರು.

ಧಾರವಾಡ ನಗರದ ವಿದ್ಯಾವರ್ಧಕ ಸಂಘದ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುದ ಅವರು, ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಪಾದಯಾತ್ರೆ, ಹೋರಾಟ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಈಗ ಮೇಕೆದಾಟು ವಿಚಾರದಲ್ಲಿ ಯಾವ ಲಾಭಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾರೆ ಎನ್ನುವುದು ನೋಡಿದ್ದರೆ ಸಾಕು ಅಲ್ಲಿ ಎಲ್ಲರಿಗೂ ತಿಳಿಯುತ್ತದೆ ಎಂದರು.
ಮೇಕೆದಾಟು ವಿಚಾರದಲ್ಲಿ ಈಗಾಗಲೇ ನಮ್ಮ ಸರ್ಕಾರ ಯಾವೆಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕು ಅದನ್ನು ಮಾಡುತ್ತಿದೆ. ಇದನ್ನು ತಿಳಿದು ಮೇಕೆದಾಟು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವವರಿಂದ, ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ಜೊತೆಗೆ ಸಿದ್ದರಾಮಯ್ಯನವರ ಹೇಳುವುದನ್ನೇಲ್ಲಾ ನಾನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.