ಮೇಕೆದಾಟು ಪಾದಯಾತ್ರೆಯು ಕಾಂಗ್ರೆಸ್ ಪಕ್ಷÀದ ಚುನಾವಣಾ ಗಿಮಿಕ್ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮನೇನಕೊಪ್ಪ, ಬಿಬಿಎಂಪಿ ಮತ್ತು ವಿಧಾನ ಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಸರ್ಕಾರ ಯಾರದೇ ಆಗಿದ್ದರೂ ಪಾದಯಾತ್ರೆ ಮಾಡಿಯೇ ತೀರುತೇವೆ ಎಂಬ ಹಠ ಸಮಂಜಸವಲ್ಲ. ವಿಧಾನ ಮಂಡಳ ಅಧಿವೇಶನ ನಡೆದು ಇನ್ನೂ 15 ದಿನಗಳು ಆಗಿಲ್ಲ. ಅಧಿವೇಶನದಲ್ಲಿ ಮೇಕೆದಾಟು ಸಂಬಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ. ಕೇವಲ ಪ್ರಚಾರ ಹಾಗೂ ಚುನಾವಣಾ ದೃಷ್ಟಿಯಿಂದಾಗಿ ಕಾಂಗ್ರೆಸ್ ಪಾದಯಾತ್ರೆ ಕೈಕೊಂಡಿದ್ದು, ಬರುವ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇನ್ನು ಈಗಾಗಲೆ ರಾಜ್ಯಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತಿದೆ. ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.