ಬಿಜೆಪಿ ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದೆ. ಕಬ್ಬಿಣದಿಂದ 2 ಕೆಲಸ ಮಾಡಬಹುದು ಒಂದು ಕತ್ತರಿ ಮಾಡಬಹುದು, ಇನ್ನೊಂದು ಸೂಜಿ ಮಾಡಬಹುದು. ಬಿಜೆಪಿ ಕತ್ತರಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‍ನಿಂದ ಜನವರಿ 9ರಿಂದ ಪಾದಯಾತ್ರೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸೂಜಿ ಮೂಲಕ ಸಮಾಜವನ್ನು ಹೊಲೆಯುವ ಕೆಲಸ ಮಾಡುತ್ತಿದೆ. ಜನರಿಗೆ ಒಳಿತಾಗುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟಿದ್ರು. ಇದನ್ನ ನಮ್ಮ ಕಾಂಗ್ರೆಸ್ ಶಾಸಕರು ಜನರಿಗೆ ಹೇಳುತ್ತಿದ್ದಾರೆ. ನಾವು ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನ ಬಿಜೆಪಿ ಮಹಾನ್ ನಾಯಕರು ಬೇಕಾದ್ರೆ ಪ್ರಶ್ನೆ ಮಾಡಲಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರ ಪರಿಸ್ಥಿತಿ. ಈಗ ಜನರ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿಕೊಳ್ಳಲಿ. ನಾವು ಕೊಟ್ಟ ಯೋಜನೆಗೆ ಬಗ್ಗೆ ಮೂರ್ನಾಲ್ಕು ಗಂಟೆ ಮಾತನಾಡಬಹುದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಇನ್ನು ಮಾತೆತ್ತಿದರೆ ಕದ್ದು ಮುಚ್ಚಿ ಹಾರಂಗಿಯಿಂದ, ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗ್ತಿದೆ. ಮೇಕೆದಾಟು ಜಲಾಶಯಾದರೆ ಇದು ತಪ್ಪಲಿದೆ. ಬೆಂಗಳೂರಿಗೆ 20 ಟಿಎಂಸಿ ಕುಡಿಯುವ ನೀರು ದೊರೆಯಲಿದೆ. ಮೇಕೆದಾಟು ಪಾದಯಾತ್ರೆ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ನಡೆಯಲಿದೆ. ಬಿಜೆಪಿ, ಜೆಡಿಎಸ್ ಬಿಎಸ್ಪಿ ಯಾರ ಬೇಕಾದರು ಬರಬಹುದು. ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆಯಿಂದ ಮೊದಲ ದಿನವೇ 10 ಸಾವಿರ ಜನ ಬರಬೇಕು, ವಾಕ್ ಫಾರ್ ವಾಟರ್, ನಮ್ಮ ನೀರು ನಮ್ಮ ಹಕ್ಕು. ತಿಂಡಿಗೆ ಅಲ್ಲೆ ಬಂದ್ ಬಿಡಿ. ತಮಟೆ ನಗಾರಿ ಅವರನ್ನು ಕಕೊರ್ಂಡು ಬಂದು ಬಿಡಿ ಎಂದು ಪಾದಯಾತ್ರೆಗೆ ಜನರನ್ನು ಇದೇ ವೇಳೆ ಡಿಕೆಶಿ ಆಹ್ವಾನಿಸಿದರು.
ಇನ್ನು ಮೇಕೆದಾಟು ರಾಮನಗರ ಚಾಮರಾಜನಗರ ಜಿಲ್ಲೆಗಳ ನಡುವೆ ಇದೆ. ಇದು ನಮ್ಮ ನೀರು ನಮ್ಮ ಹಕ್ಕು. ಹೀಗಾಗಿ ಮೊದಲ ದಿನವೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. ಎಷ್ಟು ಜನರು ಬರ್ತಿರಾ ಅಂತ ಮೊದಲೇ ಹೇಳಬೇಕು. ಟೀ ಶರ್ಟ್, ಟೋಪಿ, ಊಟ ವಸತಿ ವ್ಯವಸ್ಥೆ ಮಾಡಬೇಕು. ನಿಮ್ಮ ಎಲ್ಲರಿಗೂ ರೂಮ್ ಕೊಡಲು ಆಗಲ್ಲ. ನಿಮ್ಮ ಜೊತೆ ಚೌಲ್ಟ್ರಿಯಲ್ಲಿ ನಾನು ಮಲಗುತ್ತೇನೆ. ಎಷ್ಟು ಜನರು ಬರುತ್ತೀರಾ ಅಂತ ಸಭೆಯಲ್ಲಿದ್ದ ಜನರನ್ನು ಡಿಕೆ ಶಿವಕುಮಾರ್ ಕೇಳ್ತಿದ್ದಂತೆ ಸಮಾವೇಶದಲ್ಲಿ ಇದ್ದವರೆಲ್ಲ ಕೈ ಎತ್ತಿ ಬೆಂಬಲ ಸೂಚಿಸಿದರು. ನನಗೆ ಭಯ ಆಗುತ್ತಿದೆ ಊಟ ಜಾಸ್ತಿ ಮಾಡಿಸು ಧೃವನಾರಾಯಣ್ ಎಂದು ಡಿಕೆಶಿ ಹಾಸ್ಯ ಚಟಾಕಿ ಹಾರಿಸಿದರು.