hubbali

ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಹುಬ್ಬಳ್ಳಿ ಪೊಲೀಸರು

Share

ಕೊವೀಡ್ ನಿಯಮ‌ಪಾಲನೆಗೆ ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಅವಳಿ ನಗರ ಪೊಲೀಸರು ಮಾನವೀಯತೆ ಮೆರೆಯುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು. ಮೂರ್ಛೆರೋಗದಿಂದ ಕುಸಿದು ಬಿದ್ದಿದ್ದ ಯುವಕನಿಗೆ ಪ್ರಾಥಮಿಚಿಕಿತ್ಸೆ ನೀಡಿ ಹುಬ್ಬಳ್ಳಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ‌. ನಗರದ ಚೆನ್ನಮ್ಮ ವೃತ್ತದ ಬಳಿ ಕುಂದಾಪುರ ಮೂಲದ ನಾಗರಾಜ ಮೂರ್ಛೆ ರೋಗದಿಂದ ಬಿದ್ದಿದ್ದ. ಸ್ಥಳದಲ್ಲಿದ್ದ ಪೊಲೀಸರು ಯುವಕನಿಗೆ ಸಹಾಯ ತೆರಳಿದರು. ಯುವಕನಿಗೆ ಕೀ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆಯನ್ನು ನೀಡುವ. ಮೂಲಕ ಹುಬ್ಬಳ್ಳಿಯ ಉಪನಗರ ಪೊಲೀಸ್ ಸಿಬ್ಬಂದಿ ಮಾನವೀಯ ಕಾರ್ಯ ಮಾಡಿದ್ದಾರೆ. ವೀಕೆಂಡ್ ಕರ್ಫೂ ಮಧ್ಯೆದಲ್ಲಿಯೂ ಪೊಲೀಸರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Tags:

error: Content is protected !!