COVID-19

ಮಾರುಕಟ್ಟೆಯಲ್ಲಿ ನೋ ಮಾಸ್ಕ್ ನಿಶ್ಚಿಂತೆಯಾಗಿ ಸಾರ್ವಜನಿಕರ ಓಡಾಟ

Share

ಕಳೆದ ಎರಡು ದಿನಗಳಿಂದ ವಿಕೇಂಡ್ ಕಪ್ರ್ಯೂ ಗೆ ಉತ್ತಮ ಸ್ಪಂದನೆ ನೀಡಿದ ಹುಕ್ಕೇರಿಯ ಜನ ಇಂದು ಬೆಳಂಬೆಳಿಗ್ಗೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನರು ಮುಗಿಬಿದ್ದಿದ್ದಾರೆ.

ಕಳೆದ ಎರಡು ದಿನಗಳಿಂದ ವಿಕೇಂಡ್ ಕಪ್ರ್ಯೂ ಇರುವ ಕಾರಣ ಸಾರ್ವಜನಿಕರು ಈ ಕಪ್ರ್ಯೂ ಗೆ ಉತ್ತಮ ಪ್ರತಿಕಿಯೆ ನೀಡಿದ್ದಾರೆ. ಆದರೆ ಇಂದು ಹುಕ್ಕೇರಿ ನಗರದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಮುಗಿಬಿದ್ದ ಜನರು. ತರಕಾರಿ ಖರೀದಿಸುವ ಭರದಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

ಮದ್ಯಾಹ್ನ 12 ಘಂಟೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ವ್ಯಾಪಾರ ವಹಿವಾಟು ನಡೆಸಿದರು. ಸರ್ಕಾರದ ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಜನರು ರಾಜಾರೋಶವಾಗಿ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದರೆ ಯಾವೋಬ್ಬ ಅಧಿಕಾರಿಯೂ ಯಾರ ಮೇಲೂ ಕ್ರಮ ಜರುಗಿಸದೆ ಇರುವದು ಕಂಡು ಬಂದಿತು.

Tags:

error: Content is protected !!