ಶೆತ್ಕರಿ ಕಾಮಗಾರ ಪಕ್ಷದ ನಾಯಕರು ಹಾಗೂ ಮಹಾರಾಷ್ಟ್ರದ ಮಾಜಿ ಸಹಕಾರ ಸಚಿವರಾಗಿದ್ದ ಡಾ. ಎನ್.ಡಿ. ಪಾಟೀಲ್ ನಿಧನರಾಗಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಢವಳಿ ಗ್ರಾಮದವರಾದ ಡಾ. ಎನ್.ಡಿ.ಪಾಟೀಲ್‍ರವರಿಗೆ 93ವರ್ಷ ವಯಸ್ಸಾಗಿತ್ತು. ಮೆದುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೊಲ್ಹಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.
ಮೃತ ಎನ್.ಡಿ. ಪಾಟೀಲ್, ಎಸ್‍ಕೆಪಿ ಪಕ್ಷದ ನಾಯಕರಾಗಿ, ಮಹಾರಾಷ್ಟ್ರದಲ್ಲಿ 18ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆ ಮಹಾರಾಷ್ಟ್ರದ ಸಹಕಾರ ಸಚಿವರಾಗಿ ಕಾರ್ಯ ನಿರ್ವಸಿದ್ದಾರೆ. 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1999-2002 ರ ವೇಳೆಯಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಂಯೋಜಕರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದಾರೆ.