ದಕ್ಷಿಣದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಅಂತಾ ಹೆಸರುವಾಸಿಯಾಗಿರುವ ಕೊಡಗಿನಂತಾ ವಾತವರಣ ಚಿಕ್ಕೋಡಿಯಲ್ಲಿ ನಿರ್ಮಾಣವಾಗಿದೆ. ಹೌದು, ಕಳೆದ ಒಂದು ವಾರಗಳಿಂದ ದಟ್ಟವಾದ ಮಂಜು ಮುಸುಕಿನ ವಾತವರಣ,ಚುಮುಚುಮ ಚಳಿಯನ್ನ ಚಿಕ್ಕೋಡಿ ಜನರು ಆನಂದಿಸುತ್ತಿದ್ದಾರೆ.

ಚಿಕ್ಕೋಡಿಯಲ್ಲಿ ಕಳೆದ ಹಲವು ದಿನಗಳಿಂದ ತಂಪಾದ ಗಾಳಿ,ಚುಮು ಚುಮು ಚಳಿ ಮಧ್ಯೆ ಮಂಜಿನ ಕಣ್ಣಾಮುಚ್ಚಾಲೆಗೆ ಚಿಕ್ಕೋಡಿ ಜನರಿಗೆ ಒಂದೆಡೆ ಹಿತ ಅನುಭವ ನೀಡುತ್ತಿದ್ದರೆ ಮತ್ತೊಂದೆಡೆ ಮಾವು ಬೆಳದ ಬೆಳಗಾರರ ಆತಂಕ ಕಾರಣವಾಗಿದೆ.ಇದರ ಜೊತೆಗೆ ಬೆಳಗಿನ ಜಾವ ಕೆಲಸ ಕಾರ್ಯಗಳಿಗೆ ತೆರಳುವ ಜನರು ಮಂಜು ಮುಸುಕಿನ ವಾತವರಣಕ್ಕೆ ಹೈರಾಣಾಗಿದ್ದಾರೆ.