ಸಪ್ತಾಹಾಂತ್ಯದಲ್ಲಿ ಈ ಯುವಕರ ಸಂಘ ಸದಾ ಒಂದಿಲ್ಲೊಂದು ಸಾಮಾಜೀಕ ಚಟುವಟಿಕೆ ನಡೆಸುತ್ತದೆ. ಇಂದು ಸಾಮಾಜೀಕ ಉಪಕ್ರಮವನ್ನ ಕೈಗೊಂಡಿದೆ. ನಿರಾಶ್ರಿತರನ್ನ ಹುಡುಕಿ ಅವರ ರೂಪವನ್ನ ಬದಲಾಯಿಸುವ ಕೈಂಕರ್ಯವನ್ನ ಮಾಡುತ್ತಿದೆ. ಯಾವುದು ಈ ಬ್ರಿಗೇಡ್ ಇವರು ಮಾಡಿದ್ದಾರೂ ಏನು ಎಂಬುದನ್ನ ನೋಡೋಣ ಬನ್ನಿ…

ಹೌದು, ಬೆಳಗಾವಿಯ ಯುವ ಬ್ರಿಗೇಡ್ ಸದಾ ಒಂದಿಲ್ಲೊಂದು ಸಾಮಾಜೀಕ ಚಟುವಟಿಕೆ ನಡೆಸುವ ಕ್ರಿಯಾಶೀಲ ಸಂಘಟನೆಯಾಗಿದೆ. ಒಂದಿಲ್ಲೊಂದು ಸಾಮಾಜೀಕ ಕಾರ್ಯವನ್ನ ಸಪ್ತಾಹಾಂತ್ಯದಲ್ಲಿ ಕೈಗೊಳ್ಳುತ್ತದೆ. ಇಂದು ಬೆಳಗಾವಿಯ ವಿವಿಧೆಡೆ ಸಂಚರಿಸಿ ರಸ್ತೆ ಪಕ್ಕದಲ್ಲಿ ವಾಸಿಸುವ ಭಿಕ್ಷಕರು ಹಾಗೂ ನಿರಾಶ್ರಿತರನ್ನ ಹುಡುಕಿ ಅವರ ಕಟೀಂಗ್ ಮಾಡುವ ಮೂಲಕ ಅವರನ್ನ ಶುಚಿಗೊಳಿಸುವ ಒಂದು ಕಾರ್ಯವನ್ನ ಯುವಾ ಬ್ರೀಗೆಡ್ ಇಂದು ಕೈಗೊಂಡಿದೆ. ಕ್ಷೌರಿಕರಂತೆ ಯುವಾ ಬ್ರಿಗ್ರೇಡ್‍ನ ರಾಹುಲ ಬೆಳಗಾವಿ ಅವರು ಭಿಕ್ಷಕನೋರ್ವನ ಕ್ಷೌರ್ಯ ಮಾಡಿದರು. ನಂತರ ಹೊಸ ಸ್ನಾನ ಮಾಡಿಸಿ, ಹೊಸ ಉಡುಪುಗಳನ್ನ ತೊಡಿಸಿ, ಎಲ್ಲರ ಗಮನ ಸೆಳೆದರು. (ಫ್ಲೋ)
ಪ್ರತಿ ಯುವಾ ಬ್ರೀಗೆಡ್ ಕೆಲಸ ಮಾಡು… ಕೆಲಸ ಮಾಡು… ಕೆಲಸ ಮಾಡು… ಎಂಬ ಘೋಷವಾಕ್ಯದಡಿ ತನ್ನ ಅಭಿಯಾನವನ್ನ ಪ್ರತಿ ಶನಿವಾರ ಮತ್ತು ಭಾನುವಾರ ಮುಂದುವರೆಸುತ್ತಿದೆ.
ದೇವಸ್ಥಾನ, ಬಸ್‍ಸ್ಟ್ಯಾಂಡ್‍ಗಳ ಸ್ವಚ್ಛತೆಯನ್ನ ಮಾಡಲಾಗುತ್ತದೆ. ಹಸಿದವರಿಗೆ ಅನ್ನ ನೀಡುವ ಉದ್ಧೇಶದಿಂದ ರಾತ್ರಿಯ ವೇಳೆಯೂ ಕಾರ್ಯರತವಾಗಿತ್ತದೆ. ಅನಾಥಾಶ್ರಮದ ಮಕ್ಕಳಿಗೆ ಸಹಾಯ ಮಾಡುವ ಕೆಲಸ ಮಾಡಲಾಗುತ್ತದೆ.
ಇನ್ ನ್ಯೂಸ್‍ಗೆ ಹೆಚ್ಚಿನ ಮಾಹಿತಿ ನೀಡಿದ ರಾಹುಲ್ ಬೆಳಗಾವಿ ಅವರು ವಿಕೇಂಡ್ ಕಫ್ರ್ಯೂ ಸಮಯವನ್ನ ಯುವಕರು ಸದುಪಯೋಗ ಪಡೆಸಿಕೊಳ್ಳಬೇಕು. ಕೆಲ ದಾನಿ ಹಾಗೂ ಯುವಕರಿಂದ ನಮ್ಮ ಈ ಅಭಿಯಾನಕ್ಕೆ ಸಹಾಯ ದೊರೆತಿದೆ. 6-7 ಜನರಿಗೆ ಇಲ್ಲಿಯ ವರೆಗೆ ಕ್ಷೌರ್ಯವನ್ನ ಮಾಡಲಾಗುತ್ತಿದೆ. ಇಂತಹ ಜನರನ್ನ ಸಮಾಜ ನಿರ್ಲಕ್ಷಿಸುತ್ತದೆ. ಇದರಿಂದ ರೋಗ ರುಜಿನಗಳು ಬರುತ್ತವೆ. ಹಣ ಹೆಚ್ಚು ನೀಡಿದ್ರು ಯಾರು ಕಟೀಂಗ್ ಮಾಡಲೂ ಬರಲ್ಲ. ಭಾರತವನ್ನ ವಿಶ್ವಗುರು ಅನ್ನುತ್ತಾರೆ. ಆದರೇ ಭಾರತ ನಿಜವಾಗಲೂ ವಿಶ್ವಗುರು ಎನಿಸಬೇಕೆಂದರೇ, ನಮ್ಮ ಸಮಾಜದವರೇ ನಮ್ಮ ದೇಶದವರೇ ಆದ ಇಂತಹ ಜನರ ಸಹಾಯವನ್ನ ಮಾಡಬೇಕು ಎಂದರು. (ಬೈಟ್)
ಈ ವೇಳೆ ಯುವಾ ಬ್ರಿಗ್ರೇಡ್‍ನ ಪದಾಧಿಕಾರಿ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ಧರು.