Belagavi

ಭಾಂದೂರ್ ಗಲ್ಲಿ, ತಹಶೀಲ್ದಾರ್ ಗಲ್ಲಿಯಲ್ಲಿ ಅಸ್ವಚ್ಛತೆ ತಾಂಡವ: ಪರಿಹಾರಕ್ಕೆ ಸ್ಥಳೀಯರಿಂದ ಡಿಸಿಗೆ ಮನವಿ

Share

ಬೆಳಗಾವಿಯ ಭಾಂದೂರ್ ಗಲ್ಲಿ ಮತ್ತು ತಹಶೀಲ್ದಾರ್ ಗಲ್ಲಿಯಲ್ಲಿ ಹೊಸ ಡ್ರೈನೇಜ್ ಲೈನ್ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

ಕಲ್ಪವೃಕ್ಷ ಮಹಿಳಾ ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಸ್ಥಳೀಯರು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರನ್ನು ಭೇಟಿಯಾಗಿ ತಮ್ಮ ಪ್ರದೇಶದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.

ಸುಮಾರು ವರ್ಷಗಳಿಂದ ಭಾಂದೂರ್ ಗಲ್ಲಿ ಮತ್ತು ತಹಶೀಲ್ದಾರ್ ಗಲ್ಲಿಯಲ್ಲಿ ಡ್ರೈನೇಜ್ ಪೈಪ್ ದುರವ್ಯಸ್ಥೆಯಿಂದ ಕೂಡಿದೆ. ಡ್ರೈನೇಜ್ ನೀರು ಮುಂದೆ ಸರಾಗವಾಗಿ ಹರಿಯದೇ ಇರುವುದರಿಂದ ಸುತ್ತಮುತ್ತಲೂ ದುರ್ವಾಸನೆ ಬೀರುತ್ತಿದೆ. ಅಲ್ಲದೇ ರೈಲ್ವೇ ಭಾಗದಲ್ಲಿ ಡ್ರೈನೇಜ್ ಲೈನ್ ಚರಂಡಿಗೆ ಬಿಟ್ಟಿದ್ದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಭಾವಿಯೂ ಸಹ ಕಲುಷಿತಗೊಂಡಿವೆ. ಅಸ್ವಚ್ಛತೆಯಿಂದ ಮಲೇರಿಯಾ, ಡೇಂಗ್ಯು ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಮೊದಲೇ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಾವು ಇಲ್ಲಿ ವಾಸಿಸುವುದೇ ದುಸ್ತರವಾಗಿ ಬಿಟ್ಟಿದೆ. ಹೀಗಾಗಿ ತಕ್ಷಣವೇ ಜಿಲ್ಲಾಧಿಕಾರಿಗಳು ಇಲ್ಲಿನ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜ್ಯೋತಿ ಶೆಟ್ಟಿ, ಪುಷ್ಪಾ ದೇವರ, ಕವಿತಾ ಪೂಜಾರ, ಎಸ್.ಪಿ.ಮನಗಾಂವಕರ್, ದಿವ್ಯಾ ಪಾಟೀಲ್, ರೂಪಾ ಪಾಟೀಲ್, ರತ್ನಾ ಆನಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!