Belagavi

ಬೆಳಗಾವಿ ಪಾಲಿಕೆಗೆ ಅಭಯ್ ಪಾಟೀಲ್ ಮೇಯರ್ ಅನೀಲ್ ಬೆನಕೆ ಉಪ ಮೇಯರ್, ಉಳಿದ ಸದಸ್ಯರು ಚಹಾ ಬಿಸ್ಕೇಟ್ ತಿನ್ನೋದಾ-ಸತೀಶ್ ಜಾರಕಿಹೊಳಿ

Share

ಬೆಳಗಾವಿ ಪಾಲಿಕೆಯಲ್ಲಿ ಅನಧಿಕೃತ ಮೇಯರ್ ಉಪ ಮೇಯರ್ ಇದಾರೆ. ಸರಕಾರ ಅವರಿಗೆ ಅನಧಿಕೃತವಾಗಿ ಅಧಿಕಾರ ನಡೆಸಲು ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ವತಿಯಿಂದ ವರಿಬ್ಬರಿಗೂ ಗೌನ್ ಕೊಡುವ ಕೆಲಸ ಮಾಡುತ್ತೇವೆ. ವರಿಬ್ಬರೂ ಅಧಿಕಾರ ನಡೆಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಬೆಳಗಾವಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಳಂಬ ವಿಚಾರ ಕುರಿತಂತೆ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಬಿಜೆಪಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆಗೆ ಟಾಂಗ್ ಕೊಟ್ರು. ಪಾಲಿಕೆಯಲ್ಲಿ ಅನಧಿಕೃತವಾಗಿ ಮೇಯರ್, ಉಪ ಮೇಯರ್ ಇದ್ದಾರೆ. ಮೇಯರ್ ಅಭಯ ಪಾಟೀಲ್, ಉಪ ಮೇಯರ್ ಅನಿಲ್ ಬೆನಕೆ. ಐದು ವರ್ಷದ ಅವಧಿಗೆ ಸರ್ಕಾರ ಅನಧಿಕೃತವಾಗಿ ಘೋಷಣೆ ಮಾಡಿದೆ. ನಮ್ಮ ಪಕ್ಷದಿಂದ ಇಬ್ಬರಿಗೂ ಗೌನ್ ಕೊಡುವ ಕೆಲಸ ಮಾಡುತ್ತೇವೆ. ಬಿಜೆಪಿ ಶಾಸಕರು ಇರೋ ವರಗೆ ಅವರೇ ಮಯರ್, ಉಪಮೇಯರ್. ಇನ್ನುಳಿದ ಪಾಲಿಕೆ ಸದಸ್ಯರು ಚಹಾ, ಬಿಸ್ಕಿಟ್ ಸೇವಿಸೋಕೆ ಮಾತ್ರ ಇರೋದು ಎಂದು ಲೇವಡಿ ಮಾಡಿದರು.

ಇನ್ನು ಬೆಳಗಾವಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಚರ್ಚೆ ಮಾಡಲಾಗಿದೆ. ಎಪಿಎಂಸಿ ಉಳಿಯಬೇಕು ಈ ನಿಟ್ಟಿನಲ್ಲಿ ತೀರ್ಮಾನ ಮಾಡಿ ಅಂತ ಹೇಳಿದ್ದೇವೆ. ಖಾಸಗಿ ತರಕಾರಿ ಮಾರುಕಟ್ಟೆ ಮೇಲೆ ಯಾರ ನಿಯಂತ್ರಣ ಇಲ್ಲ. ಸರ್ಕಾರ ವೆಚ್ಚ ಮಾಡಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಿದೆ. ಖಾಸಗಿ ತರಕಾರಿ ಮಾರುಕಟ್ಟೆಯವರು ರೈತರು ಹಾಗೂ ವ್ಯಾಪಾರಿಗಳನ್ನು ಸರಕಾರಿ ಎಪಿಎಂಸಿ ಹೋಗದಂತೆ ತಡೆಯುತ್ತಿದ್ದಾರೆ. ಎಪಿಎಂಸಿಯಲ್ಲಿ ಸೆಸ್ಸ್, ತೂಕದ ವ್ಯವಸ್ಥೆ ಇದೆ. ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ವ್ಯವಸ್ಥೆ. ಬಿಜೆಪಿ ಶಾಸಕರು, ಸರ್ಕಾರ ಪರ ಇರೋದು ಬಿಟ್ಟು ಖಾಸಗಿಯವರ ಪರ ಇದ್ದಾರೆ. ಖಾಸಗಿ ಮಾರುಕಟ್ಟೆ ಪ್ರಾರಂಭ ಆಗಿದ್ದ ರಾಜ್ಯದಲ್ಲಿ ಇದೆ ಮೊದಲು. ನಮ್ಮ ಪ್ರಯತ್ನ ಎರಡು ಉಳಿಯಬೇಕು ಎಂಬುದು ಆಗಿದೆ. ಖಾಸಗಿ ಮಾರುಕಟ್ಟೆಗೆ ಕಾನೂನಿನಲ್ಲಿ ಅವಕಾಶ ಇದೆ. ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯ, ಕೇಂದ್ರ ಸರ್ಕಾರ ಖಾಸಗೀಕರಣ ಪರ ಇದೆ. ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಣೆ ಮಾಡಲು ಆಗಲ್ಲ. ಜನ ಆ ರೀತಿ ಮಾತನಾಡುತ್ತಾರೆ. ರೈತರಿಗೆ ಎರಡು ಕಡೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

Tags:

error: Content is protected !!