ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷರಾದ ಭೀಮಾಶಂಕರ್ ಪಾಟೀಲ್ ಕನ್ನಡಪರ ಹೋರಾಟಗಾರರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡುತ್ತ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನ ಮಾಡುತಿದ್ದ ಎಂಇಎಸ್ ಪುಂಡರಿಗೆ ತಕ್ಕ ಉತ್ತರ ನೀಡಿ ಜೈಲು ವಾಸವನ್ನು ಅನುಭವಿಸಿದ್ದ ಸಂಪತ್‍ಕುಮಾರ್ ದೇಸಾಯಿ ಹಾಗೂ ಸಂಗಡಿಗರಿಗೆ ಇಂದು ಬಿಡುಗಡೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದು ಎಂಇಎಸ್ ಪುಂಡರಿಗೆ ತಕ್ಕ ಉತ್ತರ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಮೆರೆದಿದ್ದಾರೆ. ಇನ್ನು ರಾಜ್ಯವನ್ನು ಆಳುವ ಸರಕಾರಗಳಿಗೆ ನಾಡಿನ ನೆಲದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಾಗಾಗಿ ಇಂದು ಸರಕಾರ ಮಾಡಬೇಕಾದ ಕಾರ್ಯವನ್ನು ನಮ್ಮ ಸಂಘಟನೆ ಮಾಡುತ್ತಿದೆ. ಬೆಳಗಾವಿಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗುವ ಬದಲು ಎಂಇಎಸ್ ನಿಷೇಧ ಕಾಯ್ದೆ ಜಾರಿಗೆ ತರಬೇಕಿತ್ತು. ಇನ್ನು ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸಿದರೆ ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ಒಂದು ಕೋಟಿ ರೂಪಾಯಿ ನೀಡಿ, ಕರ್ನಾಟಕ ಭೀಷ್ಮ ಬಿರುದು ನೀಡಿ ಗೌರವಿಸುವುದಾಗಿ ಘೋಷಣೆ ಮಾಡಿದರು.
ಬೆಳಗಾವಿಯಲ್ಲಿ ಸರಕಾರದ ಶವ ಯಾತ್ರೆ ಮಾಡುತ್ತೇವೆ, ಕೈ ಕತ್ತರಿಸುತ್ತೇವೆ ಎಂದು ಹೇಳುತ್ತಿದ್ದ ನಾಡದ್ರೋಹಿಗಳಿಗೆ ನಾವು ತಕ್ಕ ಉತ್ತರವನ್ನು ಕೊಟ್ಟಿದ್ದೇವೆ. ಬೆಳಗಾವಿಯ ನೆಲದಲ್ಲಿ ಯಾವುದೇ ಸರಕಾರ ಅಥವಾ ಯಾವುದೇ ಪಕ್ಷ ಗಂಡಸ್ಥನದ ಕೆಲಸಗಳನ್ನು ಮಾಡಿಲ್ಲ. ರಾಜಕೀಯದವರಿಗೆ ಬೆಳಗಾವಿ ಕರ್ನಾಟಕದ ಆಸ್ತಿಯಲ್ಲವಾ.. ಬೆಳಗಾವಿಯಲ್ಲಿ ಕನ್ನಡಿಗರು ಕನ್ನಡಿಗರಿಗಾಗಿ ಅಲ್ಲವಾ ಎಂದು ನಾವು ಮುಂಬರುವ ದಿನಗಳಲ್ಲಿ ರಾಜಕೀಯ ಮಾಡುವ ಮನೆಹಾಳರಿಗೆ ಕೇಳಬೇಕಾದ ಪ್ರಸಂಗ ಎದುರಾಗುತ್ತದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದ ಅಸಂದರ್ಭದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದ ಗಡಿ ವಿವಾದ ಕುರಿತಂತೆ ಚರ್ಚೆ ಮಾಡಬೇಕಿತ್ತು. ಆದರೆ ಇತ್ತೀಚೆಗೆ ಬಂದ ಕೆಲ ರಾಜಕಾರಣಿಗಳಿಗೆ ತಿಳಿದೇ ಇಲ್ಲ. ಇನ್ನು ನೀವು ಬೆಳಗಾವಿಯಲ್ಲಿ ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡಿದಿರೋ ತಿಳಿಯಲೇ ಇಲ್ಲ ಎಂದರು.