ಬೆಳಗಾವಿ ನಗರದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ದಾನಗಳಲ್ಲೇ ಶ್ರೇಷ್ಠ ದಾನ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಸ್ಟೇಶನ್ ಎದುರಿಗಿನ ಹೈ ಸ್ಟ್ರೀಟ್ ಕ್ಯಾಂಪ್‍ನಲ್ಲಿ ಹಿಂದ್ ಎಜುಕೇಶನಲ್ ಮತ್ತು ಸೋಶಿಯಲ್ ವೆಲ್‍ಫೇರ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ “ರಕ್ತ ನೀಡಿ, ಜೀವ ಉಳಿಸಿ. ನಿಮ್ಮೊಳಗೆ ನಾಯಕನನ್ನು ಕಂಡುಕೊಳ್ಳಿ” ಎಂಬ ಘೋಷಣಾ ವಾಕ್ಯದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಡಾ. ಸಮೀರ್ ಶೇಖ್, ಪ್ರತಿ ವರ್ಷ ಜನೇವರಿ 1ರಂದು ರಕ್ತದಾನ ಶಿಬಿರ ಆಯೋಜನೆ ಮಾಡುವಂತೆ ಈ ಬಾರಿಯೂ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಈ ಶಿಬಿರದ ಲಾಭವನ್ನು ರಕ್ತದಾನಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಕ್ಯಾಂಪ್ ಆಯೋಜನೆ ಮಾಡಲಾಗಿದೆ. ಒಬ್ಬ ವ್ಯಕ್ತಿ ರಕ್ತ ನೀಡುವುದರಿಂದ 4ಜೀವಗಳನ್ನು ಉಳಿಸಬಹುದು. ಹಾಗಾಗಿ ಹೆಚ್ಚು ರಕ್ತದಾನ ಮಾಡಲು ಮುಂದೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಯುವಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಸೇವಾ ಫಂಡೇಶನ್‍ನ ಅಕೀಬ್ ಬೇಪಾರಿ, ರಕ್ತದಾನ ಮಹಾದಾನವಾಗಿದೆ. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದಾಗಿದೆ. ಹಾಗಾಗಿ ಪ್ರತಿವರ್ಷದಂತೆ ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇನ್ನೂ ಅನೇಕ ಸ್ಥಳಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಬ್ಬ ದಾನಿಯನ್ನೇ ರಕ್ತಕ್ಕಾಗಿ ಅವಲಂಬಿಸಬೇಕಾಗಿದೆ. ಹಾಗಾಗಿ ದಾನಿಗಳು ಮುಂದೆ ಬಂದು ರಕ್ತದಾನ ಮಾಡಬೇಕು. ಈ ಮೂಕಲ ಇನ್ನೊಬ್ಬರ ಜೀವವನ್ನು ಉಳಿಸಲು ಮುಂದಾಗಬೇಕೆಂಬುದೇ ಎಲ್ಲರ ಆಶಯ.