ಬೆಳಗಾವಿ ನಗರಲ್ಲಿ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ರಸ್ತೆಯ ಮೇಲೆ ಅತಿಕ್ರಮ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಜಾಗೆಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೆಳಗಾವಿ ನಗರದಲ್ಲಿ ಕೆಲ ಏರಿಯಾಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ವ್ಯಾಪಾರ ವಹಿವಾಟನ್ನು ನಡೆಸಲು ರಸ್ತೆಯ ಪಕ್ಕದಲ್ಲಿ ಹಾಗೂ ರಸ್ತೆಯ ಮೇಲೆ ವ್ಯಾಪಾರಸ್ಥರು ಆಕ್ರಮಣ ಮಾಡಿಕೊಂಡಿದ್ದ ಜಾಗೆಯನ್ನು ಪಾಲಿಕೆಯ ಅತಿಕ್ರಮಣ ತೆರವು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ನಗರದ ಪ್ರಮುಖ ಸ್ಥಳಗಳಾದ ಪಾಂಗುಳಗಲ್ಲಿ ಹಾಗೂ ಗಣಪತ್‍ಗಲ್ಲಿಗಳಲ್ಲಿ ಸಂಚಾರ ಮಡಿದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳ ಮುಂದೆ ಅತಿಕ್ರಮಣ ಮಾಡಿಕೊಂಡಿದ್ದ ಜಾಗೆಯನ್ನು ತೆರವು ಮಾಡಿಸಿದರು. ಇನ್ನು ಬೆಳಿಗ್ಗೆಯಿಂದಲೇ ಈ ಕಾರ್ಯಕ್ಕೆ ಮುಂದಾದ ಪಾಲಿಕೆ ಅಧಿಕಾರಿಗಳು ಈ ರೀತಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.