ಮಕರ ಸಂಕ್ರಾಂತಿ ನಮ್ಮ ನಾಡಿಗೇ ದೊಡ್ಡ ಹಬ್ಬ. ಆದರೆ ಕೊರೊನಾ ಎಫೆಕ್ಟನಿಂದಾಗಿ ಬೆಳಗಾವಿ ನಗರದಲ್ಲಿ ಹಬ್ಬದ ಕಳೆ ಕಾಣದಂತಾಗಿದೆ. ಬೆಳಗಾವಿಯಲ್ಲಿ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿದ್ದ ಮಾರ್ಕೆಟ್‍ಗಳು ಈಗ ಖಾಲಿ ಖಾಲಿಯಾಗಿದೆ.

ಮಕರ ಸಂಕ್ರಾಂತಿ ನಮ್ಮ ನಾಡಿಗೇ ದೊಡ್ಡ ಹಬ್ಬಗಳಲ್ಲಿ ಒಂದು. ಅದರಲ್ಲಿ ಕುಂದಾನಗರಿಯಲ್ಲಿ ಸಂಕ್ರಾಂತಿ ಹಬ್ಬದಂದು ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ನಗರದಲ್ಲಿ ಕೊರೊನಾ ಸ್ಫೋಟದಿಂದಾಗಿ ಸಾರ್ವಜನಿಕರು ಮಾರ್ಕೆಟ್‍ನತ್ತ ಮುಖ ಮಾಡುತ್ತಿಲ್ಲ.
ಹಾಗಾಗಿ ಕುಂದಾನಗರಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಕೆಳೆಗುಂದಿದೆ. ನಗರದ ಪ್ರಮುಖ ಮಾರ್ಕೆಟ್ ಸ್ಥಳಗಳು ಖಾಲಿ ಹೊಡೆಯುತ್ತಿವೆ. ನಗರದ ಕಂಬಳಿ ಕೂಟ, ಮಾರುತಿ ಬೀದಿ, ಗಣಪತಿ ಬೀದಿ ಖಾಲಿ ಖಾಲಿ ಕಂಡುಬರುತ್ತಿವೆ. ಕೊರೊನಾ ಇಫೆಕ್ಟ್ ಒಂದೆಡೆಯಾದರೆ ಇನ್ನೊಂದೆಡೆ ಬೆಳಗಿನ ಛಳಿಯಿಂದಾಗಿ ಸಾರ್ವಜನಿಕರು ಮಾರ್ಕೆಟ್‍ನತ್ತ ಮುಖ ಮಾಡುತ್ತಿಲ್ಲ. ಇನ್ನು ನಾಳೆ ವೀಕೆಂಡ್ ಕಫ್ರ್ಯೂ ಮತ್ತು ಕೊರೊನಾ ಸ್ಫೋಟದ ಎಫೆಕ್ಟ್ ಮಾರುಕಟ್ಟೆಗೆ ತಗುಲಿದ್ದು ಹಬ್ಬ ಇದ್ದರೂ ಜನ ಮಾರ್ಕೆಟ್‍ಗೆ ಬರುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರ ಅಳಲು ತೋಡಿಕೊಂಡಿದ್ದಾರೆ.