Belagavi

ಬೆಳಗಾವಿ ಜಿಲ್ಲೆಯಾದ್ಯಂತ 9ದೇವಸ್ಥಾನಗಳು ಬಂದ್- ಎಂ.ಜಿ ಹಿರೇಮಠ

Share

ರಾಜ್ಯದಲ್ಲಿ ಅತೀ ವೇಗವಾಗಿ ಕೋವೀಡ್ ಸೊಂಕು ಹರಡುತ್ತಿರುವದರಿಂದ ರಾಜ್ಯ ಸರ್ಕಾರ ಟಫ್ ರೂಲ್ಸ್ ಗಳನ್ನು ಜಾರಿಗೊಂಡಿವೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳು ಅನಿಗದಿತ ಅವಧಿಯವರೆಗೆ ಬಂದ್ ಆಗಿವೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ರಾಮದುರ್ಗದ ವೀರಭದ್ರೇಶ್ವರ, ಹೊಳೆಮ್ಮಾ, ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿμÉೀಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಸವದತ್ತಿ ಯಲ್ಲಮ್ಮನ ದೇವಸ್ಥಾನ ಕ್ಕೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರು ಸಮಾವೇಶಗೊಳ್ಳುತ್ತಿದ್ದರು. ಈ ಜಾತ್ರೆಗೆ ಮಹಾರಾಷ್ಟ್ರ ರಾಜ್ಯದಿಂದಲೂ ಸಾವಿರಾರು ಜನರು ಬರುವ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಸುವದಕ್ಕೂ ನಿಬರ್ಂಧ ಹೇರಲಾಗಿದೆ. ಬೆಳಗಾವಿ ಜಿಲ್ಲೆಯ ಒಂಬತ್ತು ದೇವಸ್ಥಾನಗಳು ಮುಂದಿನ ಆದೇಶದವರೆಗೆ ಬಂದ್ ಆಗಲಿವೆ.

Tags:

error: Content is protected !!