ಕಳೆದ ಎರಡು ದಿನಗಳಿಂದ ಮಕ್ಕಳಲ್ಲಿ ಒಮಿಕ್ರಾನ್ ಹೆಚ್ಚಾಗಿದ್ದು, ಶೇ. 100 ಮಕ್ಕಳಲ್ಲಿ 20 ರಿಂದ 30 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ದರ ಹೆಚ್ಚಾಗಿದೆ.

ಡಿ.ಎಚ್.ಓ ಮುನ್ಯಾಳ ಮಾತನಾಡಿ ಜನೇವರಿ 1 ರಿಂದ 3 ನೇ ಅಲೆಯ ಪ್ರಭಾವ ವಾಗಿ ಮಕ್ಕಳಲ್ಲಿ ಅಷ್ಟೊಂದು ಪಾಸಿಟಿವಿಟಿ ಇರಿಲಿಲ್ಲ ಕಳೆದ ಎರಡು ದಿನಗಳಿಂದ ನಿರತಂರವಾಗಿ ಓಮಿಕ್ರಾನ್ ಪ್ರಭಾವ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ 100 ಮಕ್ಕಳು ಕೋವಿಡ್ ಪರೀಕ್ಷೆಗೆ ಒಳಪಟ್ಟರೆ 20 ರಿಂದ 30 ಮಕ್ಕಳಲ್ಲಿ ಸೊಂಕು ಕಂಡು ಬಂದಿರುತ್ತದೆ. ನಮ್ಮ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಜಾಸ್ತಿಯಾಗಿದೆ.
ಸುಮಾರು 82 ರಿಂದ 90 ಜನರಲ್ಲಿ ಸೊಂಕು ಕಾಣಿಸಿದ್ದು, 52 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದಂತೆ ಹೋಮ್ ಐಸೋಲೇಷನಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ ಒಟ್ಟಾರೆಯಾಗಿ 324 ಪಾಸಿಟಿವ್ ಜಿಲ್ಲೆಯಲ್ಲಿ ದಾಖಲಾಗಿದೆ ಎಂದರು.