ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಮಹಾಮಾರಿ ಕೊರೊನಾ ರಣಕೇಕೆ ಹಾಕಿದೆ. ಇಂದು ಹೊಸದಾಗಿ 294 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ.

ಸೋಮವಾರ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಜಿಲ್ಲೆಯಲ್ಲಿ 294 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 82744ಕ್ಕೆ ಏರಿಕೆಯಾಗಿದೆ. ಈವರೆಗೆ 79466 ಜನರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 2329 ಆಕ್ಟಿವ್ ಕೇಸ್‍ಗಳು ಬಾಕಿಯಿವೆ.ಇನ್ನು ಬೆಳಗಾವಿ ನಗರ ತಾಲೂಕಿನಲ್ಲಿಯೇ 90 ಕೇಸ್‍ಗಳು ದಾಖಲಾಗಿದ್ದರೆ, ಅಥಣಿ-11, ಬೈಲಹೊಂಗಲ-101, ಚಿಕ್ಕೋಡಿ-16, ಗೋಕಾಕ್-22, ಹುಕ್ಕೇರಿ-04, ಖಾನಾಪುರ-04, ರಾಮದುಗ-20, ರಾಯಬಾಗ್-07, ಸವದತ್ತಿ-15, ಇತರೆ 4 ಕೊರೊನಾ ಕೇಸ್‍ಗಳು ದೃಢಪಟ್ಟಿವೆ.