Belagavi

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಮಹಾಸ್ಫೋಟ: 393 ಪಾಸಿಟಿವ್ ಕೇಸ್

Share

ರಾಜ್ಯದಲ್ಲಿ ಇಂದು ಮತ್ತೆ ಮಹಾಮಾರಿ ಕೊರೊನಾ ರಣಕೇಕೆ ಹಾಕಿದೆ. ಇಂದು ಹೊಸದಾಗಿ 32,793 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 393 ಕೇಸ್‍ಗಳು ಪತ್ತೆಯಾಗಿವೆ.

ಶನಿವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ರಾಜ್ಯದಲ್ಲಿ 32,793 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ 7 ಜನರು ಇಂದು ಸಾವನ್ನಪ್ಪಿದ್ದಾರೆ. ಇಂದು ಶೇ.15ರಷ್ಟು ಪಾಸಿಟಿವಿಟಿ ರೇಟ್ ದಾಖಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 393 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿದ್ದು. ಒಟ್ಟು ಸೋಂಕಿತರ ಸಂಖ್ಯೆ 81982ಕ್ಕೆ ಏರಿಕೆಯಾಗಿದೆ. ಇಂದು 38 ಜನರು ಗುಣಮುಖರಾಗಿದ್ದು, ಈವರೆಗೆ 79282 ಜನರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 1751 ಆಕ್ಟಿವ್ ಕೇಸ್‍ಗಳು ಬಾಕಿಯಿವೆ.

ಇನ್ನು ಬೆಳಗಾವಿ ನಗರ ತಾಲೂಕಿನಲ್ಲಿಯೇ 179 ಕೇಸ್‍ಗಳು ದಾಖಲಾಗಿದ್ದರೆ, ಅಥಣಿ-94, ಬೈಲಹೊಂಗಲ-12, ಚಿಕ್ಕೋಡಿ-41, ಗೋಕಾಕ್-05, ಹುಕ್ಕೇರಿ-08, ಖಾನಾಪುರ-01, ರಾಮದುಗ-15, ರಾಯಬಾಗ್-19, ಸವದತ್ತಿ-19 ಕೊರೊನಾ ಕೇಸ್‍ಗಳು ದೃಢಪಟ್ಟಿವೆ. ಒಟ್ಟಿನಲ್ಲಿ ಒಂದು ಕಡೆ ವಿಪರೀತ ಥಂಡಿಯಿಂದ ಬೆಚ್ಚಿ ಬಿದ್ದಿರುವ ಜಿಲ್ಲೆಯ ಜನತೆಗೆ ಮತ್ತೊಂದು ಕಡೆ ಕೊರೊನಾ ತನ್ನ ಆರ್ಭಟ ಮುಂದುವರಿಸಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

Tags:

error: Content is protected !!