ಬೆಳಗಾವಿಯ ಜಿಲ್ಲಾಡಳಿತ ವತಿಯಿಂದ ಮಹಾಯೋಗಿ ವೇಮನ್ ಜಯಂತಿಯನ್ನು ಆಚರಿಸಲಾಯಿತು.

ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ಬುಧವಾರ ಮಹಾಯೋಗಿ ವೇಮನ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಸಮಾಜದ ಮುಖಂಡರಾದ ರಾಮಣ್ಣ ಮುಳ್ಳೂರ, ಬಿ.ಎನ್.ನಾಡಗೌಡ, ಆರ್.ಎಸ್.ಪಾಟೀಲ, ಆರ್.ವಿ.ಮಾಸ್ತಿ, ಅಪ್ಪಾಸಾಹೇಬ್ ಪಾಟೀಲ, ಎಸ್.ಬಿ.ಪಾಟೀಲ, ಆರ್.ಎಲ್.ಅರಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.