Belagavi

ಬೆಳಗಾವಿ ಆಮ್ ಆದ್ಮಿ ಮುಖಂಡ ಸದಾನಂದ ಕಲಾರಕೊಪ್ಪ ನಿಧನ

Share

ಆಮ್ ಆದ್ಮಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸದಾನಂದ ಕಲಾರಕೊಪ್ಪ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ನಿವೃತ್ತ ತಹಶೀಲ್ದಾರ್ ಆಗಿದ್ದ ಸದಾನಂದ ಕಲಾರಕೊಪ್ಪ ಬೆಳಗಾವಿಯ ಜಯನಗರದ ನಿವಾಸಿಯಾಗಿದ್ದರು. ಇವರಿಗೆ 65 ವರ್ಷ ವಯಸ್ಸಾಗಿತ್ತು. ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡರು ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತ ಸದಾನಂದ ಕಲಾರಕೊಪ್ಪ ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗ, ಸೊಸೆ, ಮಗಳು, ಅಳಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

 

 

Tags:

error: Content is protected !!