Belagavi

ಬೆಳಗಾವಿಯ ಯಳ್ಳೂರ್ ನ ನ್ಯೂ ಸೈನಿಕ್ ಸೊಸೈಟಿ ವಿರುದ್ಧ ಗ್ರಾಹಕರು ಗರಂ..!

Share

ಬೆಳಗಾವಿ ತಾಲೂಕಿನ ಯಳ್ಳುರನ ನ್ಯೂ ಸೈನಿಕ್ ಸೊಸೈಟಿಲ್ಲಿ ಇಟ್ಟ ಗ್ರಾಹಕರ ಹಣವನ್ನು ಹಿಂದುರಿಗಿಸದೇ ಸೊಸೈಟಿಯನ್ನು ಬಂದ್ ಮಾಡಿದ್ದಾರೆ. ಹಾಗಾಗಿ ನಮ್ಮ ಹಣವನ್ನು ಮರಳಿ ಕೊಡಿಸಬೇಕೆಂದು ಬೆಳಗಾವಿ ಎಸಿ ರವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿರುವ ನ್ಯೂ ಸೈನಿಕ ಸೊಸೈಟಿಯಲ್ಲಿ ನೂರಾರು ಗ್ರಾಹಕರು ಹಣ ತೊಡಗಿಸಿದ್ದಾರೆ. ಆದರೆ ಸೊಸೈಟಿಯ ನಿರ್ದೇಶಕರು ಹಾಗೂ ಅಧಿಕಾರಿಗಳು ಹಣ ವಾಪಸ್ ಕೊಡುವಂತೆ ಕೇಳಿದ್ದಾಗ ಹಣ ಕೊಡೋದಿಲ್ಲ ಅಸದೇನು ಮಾಡ್ತಿರೋ ಮಾಡಿ ಎಂದು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಕಳೆದ ನಾಲ್ಕೈದು ತಿಂಗಳಿಂದ ಸೊಸೈಟಿ ಬಾಗಿಲು ಹಾಕಿದ್ದು ಸೊಸೈಟಿಗೆ ಸಂಬಂಧಪಟ್ಟವರು ಈ ಕುರಿತಂತೆ ಸ್ಪಂದಿಸುತ್ತಿಲ್ಲ ಹಾಗಾಗಿ ನಮಗೆ ನ್ಯಯ ಕೊಡಿಸಬೇಕೆಂದು ಬೆಳಗಾವಿ ಎಸಿ ರವರಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಸೊಸೈಟಿ ಗ್ರಾಹಕರು, ಸೊಸೈಟಿ ನಮ್ಮ ಹಣವನ್ನು ಪಡೆದು ನಮ್ಮ ಹಣವನ್ನು ನಮಗೆ ವಾಪಸ್ ನೀಡುತ್ತಿಲ್ಲ. ಈ ಕುರಿತಂತೆ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳನ್ನು ಕೇಳಿದರೆ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಎಸಿರವರಿಗೆ ಮನವಿ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕ ವಿಶಾಲ್ ಉಸಳ್‍ಕರ್, ನಾನು ಸೊಸೈಟಿಯಲ್ಲಿ ಲಕ್ಷಾಂತರ ರೂಪಾಯಿ ತೊಡಗಿಸಿದ್ದೇನೆ. ಕಳೆದ ಒಂದು ವರ್ಷದಿಂದ ನನಗೆ ಅಸಲು ಹಾಗೂ ಬಡ್ಡಿ ಎರಡನ್ನೂ ಕೂಡ ನೀಡಿಲ್ಲ. ಇನ್ನು ಈ ಕುರಿತಂತೆ ಬ್ಯಾಂಕ್ ನಿರ್ದೇಶಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ರೆಸ್ಪಾನ್ಸ್ ಮಾಡುತ್ತಿಲ್ಲ. ಇನ್ನು ಹೆಚ್ಚಾಗಿ ಕೇಳಿದರೆ ಹಣ ಕೊಡೋದಿಲ್ಲ ಏನು ಮಾಡ್ತೀಯಾ ಮಾಡು ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ನ್ಯೂ ಸೈನಿಕ ಸೊಸೈಟಿ ನೂರಾರು ಜನರಿಂದ ಹಣ ಪಡೆದುಕೊಂಡು ಸತಾಯಿಸುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ. ಇನ್ನು ಈ ಕುರಿತಂತೆ ಬೆಳಗಾವಿ ಎಸಿ ರವರಿಗೆ ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತಂತೆ ಎಸಿ ರವರು ನೊಂದ ಗ್ರಾಹಕರಿಗೆ ನ್ಯಾಯ ಕೊಡಿಸಬೇಕೆಂಬುದು ಎಲ್ಲರ ಆಶಯ.

Tags:

error: Content is protected !!