Belagavi

ಬೆಳಗಾವಿಯ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಲಿ-ಚೂನಪ್ಪ ಪೂಜಾರಿ

Share

ಬೆಳಗಾವಿ ನಗರದಲ್ಲಿ ತಲೆಯತ್ತಿರುವ ಜೈ ಕಿಸಾನ್ ಖಾಸಗಿ ಭಾಜಿ ಮಾರ್ಕೆಟ್‍ನ್ನು ಸರಕಾರಿ ಅಧೀನಕ್ಕೆ ಪಡೆದುಕೊಂಡು ರೈತರ ಹಿತವನ್ನು ಕಾಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜಾರಿ ಒತ್ತಾಯಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಯನ್ನು ನಡೆಸಿ ಮಾತನಾಡಿದ ಚೂನಪ್ಪ ಪೂಜಾರಿ, ಬೆಳಗಾವಿ ನಗರದಲ್ಲಿ ಈಗಾಗಲೇ ಸರಕಾರಿ ಮಾರುಕಟ್ಟೆ ಅಸ್ತಿತ್ವದಲ್ಲಿದೆ. ಆದರೂ ಅಧಿಕಾರಿಗಳು ಖಾಸಗಿ ತರಕಾರಿ ಮಾರುಕಟ್ಟೆ ತೆರೆಯಲು ಅನುಮತಿಯನ್ನು ನೀಡಿದ್ದಾರೆ. ಇನ್ನು ಇದರ ಹಿಂದೆ ಕಾಂಗ್ರೆಸ್ ಹಾಗೂ ನಗರದ ಬಿಜೆಪಿ ಶಾಸಕರ ಕೈವಾಡವಿದೆ. ಹಾಗಾಗಿ ಸರಕಾರ ಈ ಖಾಸಗಿಕರಣ ನೀತಿಯನ್ನು ಅನುಸರಿಸುತ್ತಿದೆ.

ಕೂಡಲೇ ಸರಕಾರ ಈ ಖಾಸಗಿ ಮಾರುಕಟ್ಟೆಯನ್ನು ಸರಕಾರದ ಅಧಿನಕ್ಕೆ ತೆಗೆದುಕೊಂಡು ರಾಜ್ಯದ ರೈತರ ಹಿತವನ್ನು ರಕ್ಷಿಸುವ ಕಾರ್ಯವನ್ನು ಮಾಡಬೇಕು. ಇಲ್ಲವಾದರೆ ಮುಂಬರುವ ನಮ್ಮ ರಾಜ್ಯಮಟ್ಟದ ಸಭೆಯಲ್ಲಿ ರಾಜ್ಯದಲ್ಲಿ ಎಲ್ಲಾ ರೈತಪರ ನಾಯಕರು ಸೇರಿ ಈ ಕುರಿತಂತೆ ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ ಸರಕಾರ ಕೂಡಲೇ ಖಾಸಗಿ ಮಾರುಕಟ್ಟೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಇಲ್ಲಿ ಕೋಲ್ಡ್ ಸ್ಟೋರೇಜ್ ಮಾಡುವ ಕೆಲಸ ಮಾಡಬೇಕೆಡಂದು ಒತ್ತಾಯಿಸಿದರು.

ಇನ್ನು ಖಾಸಗಿ ಎಪಿಎಂಸಿ ಕಾರುಕಟ್ಟೆಯ ಉದ್ಘಾಟನಾ ಸಮಾರಂಭದಲ್ಲಿ ಚೂನಪ್ಪ ಪೂಜಾರಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನು ನಾನು ಅಚಾನಕ್ಕಾ ಗಿ ಅಲ್ಲಿ ಕಾರ್ಯಕ್ರಮ ನೋಡಲು ಹೋಗಿದ್ದ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಯಿತು. ಹಾಗಾಗಿ ರೈತನಾಯಕರು ಹಾಗೂ ಮಾದ್ಯಮ ಮಿತ್ರರಲ್ಲಿ ಕ್ಷಮೆ ಕೇಳಿದರು.

ಇನ್ನು ಈಗಾಗಲೇ ನಗರದಲ್ಲಿ ತಲೆಯತ್ತಿರುವ ಖಾಸಗಿ ಮಾರುಕಟ್ಟೆ ವಿಚಾರ ವಿಕೋಪಕ್ಕೆ ತಿರುಗಿದೆ. ಇನ್ನು ರಾಜ್ಯಾದ್ಯಂತ ರೈತ ನಾಯಕರು ಇದಕ್ಕೆ ತೀವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತಂತೆ ಜಿಲ್ಲಾಡಳಿತ ಯಾವ ನಿರ್ದಾರವನ್ನು ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Tags:

error: Content is protected !!